ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಕೊರೋನ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶವ್ಯಾಪಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ದಕ್ಷಿಣಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರೂ ಹಾಗೂ ಮಂಗಳೂರು ಶಾಸಕರೂ ಆದ ಯು.ಟಿ. ಖಾದರ್ ಅವರು ಸಜಿಪನಡು ಗ್ರಾಮದ ಜನತೆಗಾಗಿ ಆಹಾರ ಸಾಮಾಗ್ರಿಗಳ ಸುಮಾರು 650 ಕಿಟ್‍ಗಳನ್ನು ಕಳುಹಿಸಿದ್ದು ಸದ್ರಿ ಆಹಾರ ಸಾಮಾಗ್ರಿಗಳ ಕಿಟ್‍ನ್ನು ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ ಅವರು ಸಜಿಪನಡು ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಬಂಟ್ವಾಳ ತಾ.ಪಂ. ಸದಸ್ಯ ಹೈದರ್ ಕೈರಂಗಳ, ಬಶೀರ್ ಬೋಳಮೆ, ಸಿದ್ದೀಕ್ ಕೋಟೆಕಣಿ, ಮೂಸಬ್ಬ ಬೈಲಗುತ್ತು, ಹನೀಫ್ ಗೋಳಿಪಡ್ಪು, ತ್ವಾಹಿರ್ ಗೋಳಿಪಡ್ಪು, ನಿಸಾರ್ ಸಜಿಪ, ಆಸಿಫ್ ಸಜಿಪ, ಎಸ್.ಕೆ ಅಬ್ದುಲ್ ರಹಿಮಾನ್, ರಫೀಕ್ ಗೋಳಿಪಡ್ಪು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment