ಬಂಟ್ವಾಳ (ಕರಾವಳಿ ಟೈಮ್ಸ್) : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ.ರೋಡು ಶಾಖೆಯ ವತಿಯಿಂದ ಗುರುವಾರ ಲಾಕ್‍ಡೌನ್ ಸಂದರ್ಭ ಸಂಕಷ್ಟದಲ್ಲಿರುವ ತಾಲೂಕಿನ ಬಿ.ಸಿ.ರೋಡ್, ತುಂಬೆ, ಕಳ್ಳಿಗೆ ಪ್ರದೇಶದಲ್ಲಿರುವ 40 ವಲಸೆ ಕಾರ್ಮಿಕರ ಕುಟುಂಬಕ್ಕೆ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಡಲಾಯಿತು.
ಈ ಸಂಧರ್ಭ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ವಿ.ಕೆ. ಸುಕುಮಾರ್, ರೀಜನಲ್ ಮೇನೆಜರ್ ದಿನೇಶ್ ಅರೂರ, ಶಾಖಾ ಮುಖ್ಯ ವ್ಯವಸ್ಥಾಪಕ ಟಿ.ವಿ. ರವೀಂದ್ರ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಸಾಲಿಯಾನ್, ಸದಸ್ಯ ಮಧುಸೂದನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment