ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಬಡವರ ಕಷ್ಟ-ಸಂಕಷ್ಟಗಳತ್ತ ಸ್ಪಂದಿಸಲು ಕೈಗೊಂಡಿರುವ ಈ ದಿಟ್ಟ ನಿರ್ಧಾರದಂತೆ ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರವಲ್ಲದೆ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ, ಮುಂದಿನ ಎರಡು ತಿಂಗಳ ಅವಧಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ವಿತರಿಸಲು ಸಂಪುಟ ತೀರ್ಮಾನಿಸಿದೆ ಎಂದರು.
ಆದರೆ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ಅರ್ಜಿಯು ತಿರಸ್ಕತಗೊಂಡಿದ್ದರೆ ಈ ಸೌಲಭ್ಯ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಪ್ರತ್ಯೇಕವಾಗಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ, ಸಚಿವ ಸಂಪುಟದ ನಿರ್ಣಯವನ್ನು ಹಿರಿಯ ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ಆಹಾರ ಧಾನ್ಯ ವಿತರಿಸುವಲ್ಲಿ ವಿಫಲವಾಗುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಡಿತರ ಅಂಗಡಿಗಳ ಜವಾಬ್ದಾರಿಯೂ ಸಹ ಹೆಚ್ಚಿದ್ದು, ಸರ್ಕಾರ ನಿಗದಿ ಮಾಡಿದ ಪ್ರಮಾಣದಲ್ಲಿ ಪ್ರತಿಯೊಬ್ಬರಿಗೂ ಪಡಿತರ ತಲುಪಿಸಬೇಕು. ಸಣ್ಣಪುಟ್ಟ ದುಡ್ಡಿನಾಸೆಗೆ ಫಲಾನುಭವಿಗಳಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
0 comments:
Post a Comment