ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಅವಧಿಯಲ್ಲಿ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೋರ್ವ ಹೊಟ್ಟೆಗೆ ಹಿಟ್ಟಿಲ್ಲದೆ ಕುಳಿತುಕೊಂಡಿದ್ದ ಬಗ್ಗೆ ಮಾಹಿತಿ ತಿಳಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಾಲೂಕು ಆಡಳಿತದ ಮೂಲಕ ಆಶ್ರಯ ನೀಡುವ ಕೆಲಸ ಮಾಡಿದ್ದಾರೆ.
ಮಾಜಿ ಸಚಿವರ ಕರೆಗೆ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಮಂಗಳೂರು ವಾಮಂಜೂರಿನ ನಿರಾಶ್ರಿತರ ಶಿಬಿರಕ್ಕೆ ಸೇರಿಸಿದ್ದಾರೆ. ಈತನ ಹೆಸರು ಕೇಳಿದರೆ ಸರಿಯಾಗಿ ಮಾತನಾಡುತ್ತಿಲ್ಲ, ಊರು ಕೇಳಿದರೆ ಬಿಹಾರ ಅಂತ ಹೇಳುತ್ತಾನೆ. ವಯಸ್ಸು ಸುಮಾರು 35 ಇರಬಹುದು, ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಈತ ಭಂಡಾರಿಬೆಟ್ಟು ಭಾರತ್ ಗ್ಯಾಸ್ ದಾಸ್ತಾನು ಕೇಂದ್ರದ ಬಳಿಯಲ್ಲಿ ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಬಂದಿತ್ತು.
ಈತನಿಗೆ ಬೆಳಿಗ್ಗಿನ ಹೊತ್ತು ತಿಂಡಿಯನ್ನು ಇದೇ ಗ್ಯಾಸ್ ಗೊಡೌನ್‍ನಲ್ಲಿರುವ ಕೆಲಸಗಾರರು ನೀಡಿದ್ದರು. ಮಧ್ಯಾಹ್ನದ ಬಳಿಕವೂ ಇಲ್ಲೇ ಇದ್ದರಿಂದ ಮಾಜಿ ಸಚಿವರು ತಹಶೀಲ್ದಾರ್ ರಶ್ಮಿ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದಾರೆ. ಅವರು ಕೂಡಲೇ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಅವರನ್ನು ಸ್ಥಳಕ್ಕೆ ಕಳುಹಿಸಿ ಆತನ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿರುವುರಿಂದ ಈತನನ್ನು ಮಂಗಳೂರಿನ ವಾಮಂಜರು ನಿರಾಶ್ರಿತರ ಶಿಬಿರಕ್ಕೆ ಕೈಕಂಬದ ಸಮಾಜ ಸೇವಕ ಸಮದ್ ಅವರ ಕಾರಿನಲ್ಲಿ ಕಳುಹಿಸಿಕೊಡಲಾಗಿದೆ.
0 comments:
Post a Comment