ಬದ್ದು ಬಿ.ಸಿ.ಆರ್.
ದಿನಗೂಲಿ ನೌಕರ
ಕರಾವಳಿ ಟೈಮ್ಸ್ಪ್ರಧಾನಿ ಮೋದಿ ಕೊವಿಡ್-19 ತಡೆಗಟ್ಟಲು ಮೊದಲ ಹಂತದಲ್ಲಿ ಘೊಷಿಸಿದ್ದ ಮೂರು ವಾರಗಳ ಕಾಲ ಲಾಕ್‍ಡೌನ್ ಮುಗಿಯುವ ಹಂತಕ್ಕೆ ತಲುಪುತ್ತಿದ್ದಂತೆ ವೈರಸ್ ವ್ಯಾಪಕವಾಗಿ ಹರಡುವುದನ್ನು ಮನಗಂಡು ಮತ್ತೆ ಕೇಂದ್ರ ಸರ್ಕಾರದಿಂದ ಲಾಕ್‍ಡೌನ್ ವಿಸ್ತರಣೆಗೆ ಆದೇಶ ಬಂದಿದ್ದು, ವೈರಸ್ ತಡೆಗಟ್ಟುವಿಕೆ ದೃಷ್ಟಿಯಿಂದ ಸ್ವಾಗತಾರ್ಹ ಕ್ರಮ. ಆದರೆ ಇದನ್ನೆ ಅಸ್ತ್ರವಾಗಿಸಿಕೊಂಡ ಕೆಲ ವರ್ತಕರು ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು ಕಂಡುಬರುತ್ತಿದೆ. ಲಾಕ್‍ಡೌನ್‍ಗೂ ಮುಂಚಿತವಾಗಿ 10 ಕೆಜಿಗೆ 360 ರೂಪಾಯಿ ಇದ್ದ ಕುಚ್ಚಲಕ್ಕಿ ಬೆಲೆ ಇದೀಗ 400 ರೂಪಾಯಿ ಗಡಿ ದಾಟಿದೆ. ಅದೇ ರೀತಿ ಅಗತ್ಯ ವಸ್ತುಗಳಾದ ಮೆಣಸು, ಈರಳ್ಳಿ ಮೊದಲಾದವುಗಳ ಬೆಲೆ ಒನ್ ಟು ಡಬಲ್ ಆಗಿ ಏರಿಕೆ ಕಂಡಿದೆ. ಇದರಿಂದಾಗಿ ದಿನಗೂಲಿ ನೌಕರರಿಗೆ ಹೆಚ್ಚಾಗಿ ಹೊಡೆತ ಬಿದ್ದಿದೆ, ತಿಂಗಳುಗಟ್ಟಲೆಗೆ ಬೇಕಾದ ರೇಶನ್‍ಗಳನ್ನು ಮನೆಯಲ್ಲಿ ಒಮ್ಮೆಲೆ ಸ್ಟಾಕ್ ಮಾಡಲು ಶಕ್ತರಲ್ಲದ ದಿನಗೂಲಿಯನ್ನೆ ನಂಬಿ ಸಂಜೆ ಕೆಲಸ ಬಿಟ್ಟು ಹೋಗುವಾಗ ರೇಶನ್ ಖರೀದಿಸಿಕೊಂಡು ಹೊಗುತ್ತಿರುವವರ ಪಾಡು ಇದೀಗ ಕೈಯಲ್ಲಿ ಕೆಲಸ ಇಲ್ಲದೆ ಅಧಪತನದತ್ತ ಸಾಗುತ್ತಿದ್ದು, ಜೀವನದಲ್ಲಿ ಒಮ್ಮೆಯೂ ಕಂಡು ಕೇಳರಿಯದ ಲಾಕ್‍ಡೌನ್ ಮದ್ಯೆ ಅಕ್ಷರಶಃ ನಲುಗಿ ಹೋಗುವಂತಾಗಿದೆ. ಬೆಲೆಯೇರಿಕೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ಣಾಯಿಸದೆ ಇದ್ದಲ್ಲಿ ಮುಂದೆ ಅಗತ್ಯ ವಸ್ತುಗಳ ಖರೀದಿಸುವಲ್ಲಿ ಜನ ಸಾಮಾನ್ಯನ ಪಾಡು ಕ್ಲಿಷ್ಟಕರವಾಗುವುವಲ್ಲಿ ಶಂಶಯವಿಲ್ಲ...!
0 comments:
Post a Comment