ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ವತಿಯಿಂದ ತಾಲೂಕಿನ ಮುದ್ರಣ ಸಂಸ್ಥೆಯಲ್ಲಿರುವ ಮುದ್ರಣ ಸಂಸ್ಥೆಯ ಮಾಲಕ ಮತ್ತು ಕಾರ್ಮಿಕ ಕುಟುಂಬಗಳಿಗೆ ಅಕ್ಕಿ ವಿತರಣೆ ಬುಧವಾರ ಬಿ.ಸಿ.ರೋಡಿನ ಸಪ್ತಗಿರಿ ಪ್ರಿಂಟರ್ಸ್ ಸಂಸ್ಥೆಯಲ್ಲಿ ನಡೆಯಿತು. ಗೌರವ ಸಲಹೆಗಾರರಾದ ರಾಮದಾಸ್ ಬಂಟ್ವಾಳ ವಿತರಣೆ ಮಾಡಿದರು.
ಈ ಸಂದರ್ಭ ಅದ್ಯಕ್ಷ ಈಶ್ವರ ಕುಮಾರ್ ಭಟ್, ಸ್ಥಾಪಕಾದ್ಯಕ್ಷ ಲಿಯೋ ಬಾಸಿಲ್ ಫೆನಾಂಡೀಸ್, ಉಪಾದ್ಯಕ್ಷ ವಿದ್ಯಾಧರ್ ಜೈನ್, ಕಾರ್ಯದರ್ಶಿ ಯಾದವ ಕುಲಾಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿನಾಯಕ್ ಭಟ್, ಲಾವಣ್ಯ ಜ್ಯೋತಿಗುಡ್ಡೆ, ಸದಸ್ಯರಾದ ಮಾಧವ ಮಿತ್ತಬೈಲ್, ಮಾಧವ ದರಿಬಾಗಿಲು, ಮಿಥುನ್ ನರಿಕೊಂಬು, ಮಮತಾ ಮೊಡಂಕಾಪು, ಸೇಸಪ್ಪ ಮಿತ್ತಬೈಲ್, ಭವಾನಿಶಂಕರ್ ಪರಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment