ಬೆಂಗಳೂರು (ಕರಾವಳಿ ಟೈಮ್ಸ್) : ಸುದೀರ್ಘ ರಜೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪುನಃ ಪರೀಕ್ಷೆಯ ಮನಸ್ಥಿತಿಗೆ ತರಲು ಪುನರ್ ಮನನದ ತರಗತಿಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ದೀರ್ಘ ಕಾಲದ ರಜೆಯಿಂದ ಪರೀಕ್ಷೆಯ ಮನಸ್ಥಿತಿಗೆ ಮಕ್ಕಳನ್ನು ಕರೆತರುವ ಸಲುವಾಗಿ ಪುನರ್ ಮನನದ ತರಗತಿ ನಡೆಯಲಿದೆ ಎಂದ ಸಚಿವರು ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಸಲುವಾಗಿ ಪರೀಕ್ಷೆಗೂ ಮುನ್ನ 1 ವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪುನರ್ ಮನನ ತರಗತಿ ನಡೆಯಲಿದೆ. ಎ. 14ರ ಬಳಿಕ ಪರೀಕ್ಷಾ ವೇಳಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
0 comments:
Post a Comment