ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ತೆಂಕಕಜೆಕಾರು ಗ್ರಾಮದ ಪೈರು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟ ಕೇಂದ್ರಕ್ಕೆ ಭಾನುವಾರ ಸಂಜೆ ದಾಳಿ ನಡೆಸಿದ ಡಿಸಿಐಬಿ ಪೆÇಲೀಸ್ ನಿರೀಕ್ಷಕರ ನೇತೃತ್ವದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕು, ಉಳಿ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಾಫ ಅಲಿಯಾಸ್ ಮುನ್ನ (48), ಮೂಡಪಡುಕೊಡಿ ಗ್ರಾಮದ ನಿವಾಸಿ ಹೈದರ್ (37), ಕಾವಳಪಡೂರು ಗ್ರಾಮದ ನಿವಾಸಿ ಅಬ್ದುಲ್ ನವಾಝ್ (40), ಬಡಗಕಜೆಕಾರು ಗ್ರಾಮದ ನಿವಾಸಿ ಜಾನ್ ಮೋರಾಸ್ (44), ಬೆಳ್ತಂಗಡಿ ತಾಲೂಕು, ಸೋಣಂದೂರು ಗ್ರಾಮದ ನಿವಾಸಿ ಶಬೀರ್ (26) ಹಾಗೂ ಬೆಳ್ತಂಗಡಿ ಮಾಲಾಡಿ ಗ್ರಾಮದ ನಿವಾಸಿ ಲೋಕೇಶ್ (48) ಎಂದು ಹೆಸರಿಸಲಾಗಿದೆ.
ಉಳಿದ ಏಳು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ. ಜೂಜಾಟಕ್ಕೆ ಬಳಸಿದ 2,15,100/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪ್ರಸ್ತುತ ಕೋರೊನಾ ಸಾಂಕ್ರಾಮಿಕ ರೋಗ ಕೋವಿಡ್-19 ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ ಜನ ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕೂಡಾ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಆಟವಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಕಲಂ 87 ಕೆಪಿ ಆಕ್ಟ್ ಹಾಗೂ 269, 270 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment