ಬೆಳ್ತಂಗಡಿ (ಕರಾವಳಿ ಟೈಮ್ಸ್) : ಕೊವಿಡ್-19 ವೈರಸ್ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್‍ಡೌನ್ ಸಂದರ್ಭ ಸಂಕಷ್ಟಕ್ಕೊಳಗಾಗಿರುವ ಬಡ ಕುಟುಂಬಗಳ ಅನುಕೂಲಕ್ಕಾಗಿ ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ವಿಖಾಯ ಎಮರ್ಜೆನ್ಸಿ ವತಿಯಿಂದ ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಸರ್ವ ಧರ್ಮಗಳನ್ನೊಳಗೊಂಡ ಬಡ, ಕೂಲಿ ಕಾರ್ಮಿಕ ಕುಟುಂಬಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಆಹಾರ ಸಾಮಗ್ರಿ ಕಿಟ್‍ಗಳನ್ನು ಇಲ್ಲಿನ ನೂರುಲ್ ಹುದಾ ಜುಮಾ ಮಸೀದಿ ವಠಾರದಲ್ಲಿ ವಿತರಿಸಲಾಯಿತು.
ಹೊಸಂಗಡಿ ಪಂಚಾಯತ್ ಅಧ್ಯಕ್ಷೆ ಹೇಮಾ ವಸಂತ್, ತಾ.ಪಂ. ಸದಸ್ಯ ವಿಜಯ ಗೌಡ, ಪಂಚಾಯತ್ ಸದಸ್ಯರುಗಳಾದ ಹರಿಪ್ರದಾದ್, ಅಕ್ಬರ್ ಅಲಿ, ರೋಶನ್ ಮೊರಾಸ್ ಅವರು ಸಾಂಕೇತಿಕವಾಗಿ ಕೆಲ ಕುಟುಂಬಗಳಿಗೆ ಕಿಟ್ ವಿತರಿಸಿದರು. ಬಳಿಕ ಎಸ್ಕೆಎಸ್ಸೆಸ್ಸೆಫ್ ವಿಖಾಯ ಎಮರ್ಜೆನ್ಸಿ ಟೀಮಿನ ಸದಸ್ಯರು ಮನೆ ಮನೆಗೆ ತೆರಳಿ ವಿತರಿಸಿದರು.
ಈ ಸಂಧರ್ಭ ಪಡ್ಡಂದಡ್ಕ ನೂರುಲ್ ಹುದಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಕಿರೊಡಿ, ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖಾಧ್ಯಕ್ಷ ಬಶೀರ್ ಗಾಂಧಿನಗರ, ಕಾರ್ಯದರ್ಶಿ ಮನ್ಸೂರ್ ಕೆ., ಯು.ಕೆ. ರಿಝ್ವಾನ್, ಎಸ್.ಕೆ. ರಝಾಕ್ ಹಾಗೂ ಇಸ್ಮಾಯಿಲ್ ಕೆ. ಪೆರಿಂಜೆ ಮೊದಲಾದವರು ಉಪಸ್ಥಿತರಿದ್ದರು.
ಹೊಸಂಗಡಿ, ಬಡಕೊಡಿ, ಕರಿಮಣೇಲು ಮರೋಡಿ, ಕಾಶಿಪಟ್ಣ ಗೋಳಿಯಂಗಡಿ ಗ್ರಾಮಗಳಿಂದ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.
0 comments:
Post a Comment