ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಪರಿಣಾಮವಾಗಿ ಲಾಕ್‍ಡೌನ್ ಘೋಷಣೆಯಾಗಿ ದೀರ್ಘ ಸಮಯ ಸ್ಥಬ್ದವಾಗಿರುವ ಹಿನ್ನಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಇಂಜಿನಿಯರಿಂಗ್ ಮೊದಲಾದ ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ವಿಷಯವಾರು ಅಧ್ಯಯನ ಪೂರ್ಣಗೊಳಿಸುವ ಹಿನ್ನಲೆಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಕಾಲೇಜುಗಳು ಡಿಜಿಟಲ್ ಆನ್‍ಲೈನ್ ತರಗತಿ ಮೊರೆ ಹೋಗಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯ ಪ್ರತಿಯೊಂದು ತಾಂತ್ರಿಕ ಕಾಲೇಜುಗಳು ಪ್ರತೀ ವಿದ್ಯಾರ್ಥಿಗಳನ್ನು ಆನ್‍ಲೈನ್ ಗ್ರೂಪಿನಡಿ ಸೇರಿಸಿಕೊಂಡು ವೀಡಿಯೋ ಹಾಗೂ ಚಾಟ್ ತರಗತಿಗಳನ್ನು ಪ್ರತಿ ವಿಷಯವಾರು ವಿಂಗಡಿಸಿ ವಿವಿಧ ಉಪನ್ಯಾಸಕರಿಂದ ನಡೆಸಲಾಗುತ್ತಿದೆ. ದಿನಕ್ಕೆ ಎರಡು ಅಥವಾ ಮೂರು ವಿಷಯಗಳಿಗೆ ಸಂಬಂಧಿಸಿ ವಿವಿಧ ಉಪನ್ಯಾಸಕರು ಇಂತಹ ಆನ್‍ಲೈನ್ ತರಗತಿಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳೆಲ್ಲರೂ ಏಕಕಾಲದಲ್ಲಿ ಇಂತಹ ಆನ್‍ಲೈನ್ ತರಗತಿಗಳಲ್ಲಿ ಭಾಗವಹಿಸಿ ತಮ್ಮ ಅಧ್ಯಯನವನ್ನು ಮುಂದುವರಿಸುವ ಮೂಲಕ ಸೆಮಿಸ್ಟರ್ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದಾರೆ.
0 comments:
Post a Comment