ಮಂಗಳೂರು (ಕರಾವಳಿ ಟೈಮ್ಸ್) : ಎಪ್ರಿಲ್ 3 (ಇಂದು) ಶುಕ್ರವಾರದಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಯಾವುದೇ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಈ ಬಗ್ಗೆ ಗುರುವಾರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ ಆದೇಶ ಹೊರಡಿಸಿದ್ದು, ದಿನ ಬಳಕೆ ಸಾಗಾಣಿಕ ವಾಹನಗಳನ್ನು ಹೊರತುಪಡಿಸಿ ಇತರೆ ತುರ್ತು ಸೇವೆಗಳಾದ ಆರೋಗ್ಯ ಇಲಾಖೆ, ಬ್ಯಾಂಕ್ ನೌಕರರು, ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳ ಸಿಬ್ಬಂದಿಗಳು ತಮ್ಮ ಗುರುತು ಚೀಟಿಯನ್ನು ತೋರಿಸಿ ಕರ್ತವ್ಯಕ್ಕೆ ತೆರಳಬಹುದಾಗಿದೆ.
ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಲು ಈಗಾಗಲೇ ನಿಗದಿಯಾಗಿರುವ ಅವಧಿ ಬೆಳಿಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ತೆರಳುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಬಹುದಾಗಿದ್ದು, ಅಟೋರಿಕ್ಷಾ/ಇತರೆ ಯಾವುದೇ ಬಾಡಿಗೆ ವಾಹನದಲ್ಲಿ ತೆರಳುವವರು ಇತರೆ ಯಾವುದೇ ಜನರನ್ನು ಒಯ್ಯುವಂತಿಲ್ಲ.
ಇವುಗಳನ್ನು ಹೊರತುಪಡಿಸಿ ಯಾವುದೇ ವೈದ್ಯಕೀಯ ತುರ್ತು ಸಮಯದಲ್ಲಿ 108 ಅಥವಾ 1077 ಕರೆ ಮಾಡಬಹುದಾಗಿದೆ. ವೈಧ್ಯಕೀಯ ತುರ್ತು ಸಮಯದಲ್ಲಿ ಖಾಸಗಿ ವಾಹನದ ಬಳಕೆಗಾಗಿ 1077ಗೆ ಕರೆಮಾಡಿ ಪಾಸ್ ಪಡೆಯಲು ವ್ಯವಸ್ಥೆ ಮಾಡಲಾಗಿರುತ್ತದೆ. ಸಾರ್ವಜ£ಕರು ಸಹಕರಿಸುವಂತೆ ಜಿಲ್ಲಾ ಎಸ್ಪಿ ಸೂಚಿಸಿದ್ದಾರೆ.
0 comments:
Post a Comment