ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಿಲಿಕಾನ್ ಸಿಟಿಯಲ್ಲಿ ಲಾಂಗು, ಮಚ್ಚುಗಳ ಅಟ್ಟಹಾಸ ನಿಂತಿಲ್ಲ.
ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಮುಕುಂದ ಅಲಿಯಾಸ್ ಕರಿಹಂದಿ ಎಂಬಾತನನ್ನು ಗ್ಯಾಂಗ್ ಒಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಟೋ ರಾಮ ಎನ್ನುವವನ ಶಿಷ್ಯನಾಗಿದ್ದ ಮುಕುಂದ ಕೊಲೆಯಾಗಿದ್ದು ಕೊಲೆಗಾರ ಗ್ಯಾಂಗ್ ಯಾವುದೆಂದು ಪತ್ತೆಯಾಗಿಲ್ಲ. ಮೃತ ಮುಕುಂದನ ಮೇಲೆ ಹನುಮಂತನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು.
0 comments:
Post a Comment