ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಲಾಕ್‍ಡೌನ್ ನಡುವೆ ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳಿಗೆ ಸರಕಾರ ಬಿಗ್ ಶಾಕ್ ನೀಡಿದೆ. ದಿಢೀರನೇ ಸರಕಾರ ಪಿಜಿ, ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.
ಖಾಸಗಿ ಕಾಲೇಜ್‍ಗಳು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಹೆಚ್ಚಿಸಿದೆ.
ಪ್ರತಿ ವರ್ಷ 10-15% ಶುಲ್ಕ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ.
2020- 21ನೇ ಸಾಲಿನ ಶುಲ್ಕ ವಿವರ ಈ ರೀತಿ ಇದೆ :
ಮೆಡಿಕಲ್-ಖಾಸಗಿ ಕೋಟಾ
ಕ್ಲಿನಿಕಲ್ : 11,34,705 ರೂಪಾಯಿ
ಪ್ಯಾರಾ ಕ್ಲಿನಿಕಲ್ : 2,83,677 ರೂಪಾಯಿ
ಪ್ರಿ-ಕ್ಲಿನಿಕಲ್ : 1,42,698 ರೂಪಾಯಿ
ಮೆಡಿಕಲ್-ಖಾಸಗಿ ಕಾಲೇಜ್‍ನಲ್ಲಿ ಸರಕಾರಿ ಕೋಟಾ
ಕ್ಲಿನಿಕಲ್ : 6,98,280 ರೂಪಾಯಿ
ಪ್ಯಾರಾ ಕ್ಲಿನಿಕಲ್ : 1,74,570 ರೂಪಾಯಿ
ಪ್ರಿ-ಕ್ಲಿನಿಕಲ್ : 87,286 ರೂಪಾಯಿ
ಡೆಂಟಲ್ ಕೋರ್ಸ್
ಖಾಸಗಿ ಕಾಲೇಜು ಕೋಟಾ : 6,05,176 ರೂಪಾಯಿ
ಖಾಸಗಿ ಕಾಲೇಜಲ್ಲಿ ಸರಕಾರಿ ಕೋಟಾ : 3,57,076 ರೂಪಾಯಿ
ಸರಕಾರಿ ಕಾಲೇಜುಗಳ ಸೀಟು ಶುಲ್ಕ ಹೆಚ್ಚಳ ಇಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾ ಮತ್ತು ಮ್ಯಾನೇಜ್‍ಮೆಂಟ್ ಕೋಟಾದ ಶುಲ್ಕವನ್ನು ಮಾತ್ರ ಸರಕಾರ ಹೆಚ್ಚಳ ಮಾಡಿದೆ.
0 comments:
Post a Comment