ಮಂಗಳೂರು (ಕರಾವಳಿ ಟೈಮ್ಸ್) : ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧೀನದ ದಅವಾ ಕಾಲೇಜು ವಿದ್ಯಾರ್ಥಿಗಳ ಸಂಘಟನೆಯಾದ ಬಿಶಾರತುಲ್ ಮದೀನಾ ಸ್ಟೂಡೆಂಟ್ಸ್ ಎಸೋಸಿಯೇಷನ್ ವತಿಯಿಂದ ಅಲ್-ಮದೀನದಲ್ಲಿ ದಅವಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಲಾಕ್‍ಡೌನ್ ಬಿಡುವಿನ ಸದುಪಯೋಗಕ್ಕಾಗಿ ವಿವಿಧ ವಿಷಯಗಳಲ್ಲಿ ಆನ್‍ಲೈನ್ ಮುಖಾಂತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಗಳು ಎಪ್ರಿಲ್ 20, 21 ಹಾಗೂ 22 ರಂದು ಮೂರು ದಿನಗಳಲ್ಲಿ ನಡೆಯಲಿದೆ. ಆನ್‍ಲೈನ್ ಮುಖಾಂತರವೇ ತೀರ್ಪುಗಾರರು ಮೌಲ್ಯಮಾಪನ ನಡೆಸಿ, ವಿಜೇತರನ್ನು ಆಯ್ಕೆ ಮಾಡುತ್ತಾರೆ. ಕಾರ್ಯಕ್ರಮದ ಉದ್ಘಾಟನೆಯು ಇಂದು ಆನ್‍ಲೈನ್ ಮುಖಾಂತರ ನೆರವೇರಲಿದ್ದು, ಅಲ್-ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸುವರು. ಅಧ್ಯಾಪಕ ಮುಹಮ್ಮದ್ ಕುಂಞÂ ಅಮ್ಜದಿ, ದಅವಾ ಕಾಲೇಜು ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ, ಅಬ್ದುರ್ರಝಾಕ್ ಮಾಸ್ಟರ್ ನಾವೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment