ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಉಡುಪಿ ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗುವತ್ತ ದಾಪುಗಾಲು ಇಡುತ್ತಿದ್ದು, ಇಲ್ಲಿನ ಜಿಲ್ಲಾಧಿಕಾರಿಯವರ ವಿಶೇಷ ಮುತುವರ್ಜಿಯಂತೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳೂರು-ಉಡುಪಿ ಗಡಿ ಪ್ರದೇಶವಾಗಿರುವ ಹೆಜಮಾಡಿಯಲ್ಲಿ ವಿಶೇಷ ಚೆಕ್ ಪೋಸ್ಟ್ ನಿರ್ಮಿಸಿ ಉಭಯ ಜಿಲ್ಲಾ ಗಡಿ ಹಾದು ಹೋಗುವ ಮಂದಿಯನ್ನು ಉತ್ತಮ ರೀತಿಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಗಡಿ ಹಾದು ಹೋಗುವ ಪ್ರತಿಯೊಂದು ವಾಹನಗಳನ್ನೂ ವಿಶೇಷ ರೀತಿಯ ತಪಾಸಣೆ ನಡೆಸುವ ಪೊಲೀಸ್ ಅಧಿಕಾರಿಗಳು ವಾಹನ ಚಾಲಕರು ಹಾಗೂ ಪ್ರಯಾಣಿಕರೊಂದಿಗೆ ಅತ್ಯಂತ ಸೌಜನ್ಯಯುತ ರೀತಿಯಲ್ಲಿ ವರ್ತಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರತಿ ವಾಹನದ ಪ್ರಯಾಣಿಕರನ್ನು ಆರೋಗ್ಯ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಕ್ರೀನಿಂಗ್ ನಡೆಸಿ ಮಾಹಿತಿಗಳನ್ನು ತಮ್ಮದೇ ಕಡತದಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅನಾವಶ್ಯಕವಾಗಿ ಗಡಿ ದಾಟುವ ಮಂದಿಗಳ ಮೇಲೆ ವಿಶೇಷ ನಿಗಾ ಇಡುವ ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ.
0 comments:
Post a Comment