ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸಿಎಂ ಪರಿಹಾರ ನಿಧಿಗೆ ಮಂಗಳೂರಿನ 5 ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನೇ ದೇಣಿಗೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
ಮಂಗಳೂರು-ಫಳ್ನೀರ್‍ನಲ್ಲಿ ವಾಸವಾಗಿರುವ ಅತಾವುರ್ರಹ್ಮಾನ್ ಎಂಬ ಐದು ವರ್ಷದ ಬಾಲಕ ತನ್ನ ತಂದೆ ಹಾಗೂ ಮನೆಯವರು ನೀಡುವ ಪಾಕೆಟ್ ಮನಿಯನ್ನು ಜೋಪಾನವಾಗಿ ಹುಂಡಿಯಲ್ಲಿ ಹಾಕಿದ್ದ. ಈ ಮೂರು ದಿನಗಳಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರ ಎಲ್ಲರಿಂದ ದೇಣಿಗೆ ಕೇಳುತ್ತಿರುವುದನ್ನು ಅರಿತ ಬಾಲಕ ತಾನೂ ತನ್ನ ಪಾಕೆಟ್ ಮನಿಯನ್ನು ದೇಣಿಗೆ ನೀಡುವ ಇಚ್ಚೆ ಪ್ರಕಟಿಸಿದ್ದಾರೆ.
ಬಾಲಕ ಇಚ್ಚೆಯನ್ನು ಪೆÇ್ರೀತ್ಸಾಹಿಸಿದ ಬಾಲಕನ ಪೆÇೀಷಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಡಿಸಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣವನ್ನು ಸಲ್ಲಿಸಿದ್ದಾರೆ. ಅತಾವುರ್ರಹ್ಮಾನ್ ಕುಟುಂಬ ಮೂಲತಃ ಭಟ್ಕಳ ಮೂಲದವರಾಗಿದ್ದು, ಪ್ರಸ್ತುತ ಮಂಗಳೂರಿನ ಫಳ್ನೀರ್‍ನಲ್ಲಿ ನೆಲೆಸಿದ್ದು, ಅತಾವುರ್ರಹ್ಮಾನ್ ಮಂಗಳೂರಿನ ಯನೆಪೆÇಯ ಮೊಂಟೆಸ್ಸರಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಪುಟ್ಟ ಬಾಲಕನ ಮಾನವೀಯ ಕಳಕಳಿಗೆ ಇದೀಗ ಎಲ್ಲೆಡೆಯಿಂದ ಹ್ಯಾಟ್ಸಪ್ ವ್ಯಕ್ತವಾಗಿದೆ.
0 comments:
Post a Comment