ಕೇರಳದಿಂದ ಬಂದು ಮಾಹಿತಿ ನೀಡದ ಪುದು ನಿವಾಸಿ ಕ್ವಾರಂಟೈನ್ ಗೆ - Karavali Times ಕೇರಳದಿಂದ ಬಂದು ಮಾಹಿತಿ ನೀಡದ ಪುದು ನಿವಾಸಿ ಕ್ವಾರಂಟೈನ್ ಗೆ - Karavali Times

728x90

15 April 2020

ಕೇರಳದಿಂದ ಬಂದು ಮಾಹಿತಿ ನೀಡದ ಪುದು ನಿವಾಸಿ ಕ್ವಾರಂಟೈನ್ ಗೆ



ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್ ಡೌನ್ ಘೋಷಣೆಯಾದ ಬಳಿಕ ಕೇರಳದಿಂದ ಬಂದು ಯಾವುದೇ ತಪಾಸಣೆ ನಡೆಸದೆ, ಅಧಿಕಾರಿಗಳಿಗೆ ಮಾಹಿತಿಯೂ ನೀಡದೆ ಇದ್ದ ತಾಲೂಕಿನ ಪುದು ಗ್ರಾಮದ ನಿವಾಸಿ ಮುಹಮ್ಮದ್ ಅಶ್ರಫ್ ಎಂಬಾತನನ್ನು ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿ ಆಸ್ಪತ್ರೆ ಕ್ವಾರಂಟೈನ್ ಗೆ ಕಳುಹಿಸಿದ್ದಲ್ಲದೆ ಆತನ ವಿರುದ್ದ ಪ್ರಕರಣ ದಾಖಳಲಿಸಿಕೊಂಡಿದ್ದಾರೆ.


  ಪುದು ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಅಶ್ರಪ್ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಘೋಷಣೆಯಾದ ನಂತರ ಅಂದರೆ ಎಪ್ರಿಲ್  11 ರಂದು ಲಾರಿ ಮೂಲಕ ಮಂಗಳೂರು ಬಂದು ಆತನ ಸಂಬಂಧಿಕರ ಮನೆಯಾದ ಬಂಟ್ವಾಳ ಸಜಿಪಮೂಡ ಗ್ರಾಮದ ಬೊಳ್ಳಾಯಿ ಎಂಬಲ್ಲಿ ತಂಗಿದ್ದ.

  ಈ ಬಗ್ಗೆ ಎಪ್ರಿಲ್  15 ರಂದು ಸ್ಥಳಿಯರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಆತನನ್ನು ಹಾಸ್ಪಿಟಲ್ ಕ್ವಾರೆಂಟೈನ್ ಗೆ ದಾಖಲಿರುತ್ತಾರೆ ಹಾಗೂ ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಪಡದೆ ನಿರ್ಲಕ್ಷ್ಯ ವಹಿಸಿ ಅಂತರ್  ರಾಜ್ಯ ಪ್ರಯಾಣಿಸಿರುವುದಕ್ಕೆ ಆತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 269, 270 ಐಪಿ ಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೇರಳದಿಂದ ಬಂದು ಮಾಹಿತಿ ನೀಡದ ಪುದು ನಿವಾಸಿ ಕ್ವಾರಂಟೈನ್ ಗೆ Rating: 5 Reviewed By: karavali Times
Scroll to Top