ಬಂಟ್ವಾಳ (ಕರಾವಳಿ ಟೈಮ್ಸ್) : ಮರ್‍ಹೂಂ ಶೈಖುನಾ ಮಿತ್ತಬೈಲು ಜಬ್ಬಾರ್ ಉಸ್ತಾದ್ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಅವರ ಫ್ಯಾಮಿಲಿ ಗ್ರೂಪ್, ಎಸ್ಕೆಎಸ್ಸೆಸ್ಸೆಫ್ ಆಲಾಡಿ ಹಾಗೂ ಮಲಾಯಿಬೆಟ್ಟು ಶಾಖೆಗಳ, ಕರಂದಾಡಿ ಫ್ಯಾಮಿಲಿ ಗ್ರೂಪ್ ಇವರ ಸಂಯುಕ್ತ ಆಶ್ರಯದಲ್ಲಿ, ಮಾಜಿ ಸಚಿವ ಬಿ. ರಮಾನಾಥ ರೈ ಮಾರ್ಗದರ್ಶನದಲ್ಲಿ ಸ್ಥಳೀಯ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಸಹಕಾರದೊಂದಿಗೆ ಸಜಿಪಮುನ್ನೂರು ಗ್ರಾಮ ಪಂಚಾಯತಿಯ 144 ಹಾಗೂ 145ನೇ ವಾರ್ಡಿನ ಸರ್ವ ಜಾತಿ-ಧರ್ಮದ ಬಾಂಧವರಿಗೆ ಲಾಕ್‍ಡೌನ್ ಸಂಕಷ್ಟದ ಸಮಯದಲ್ಲಿ ಒಟ್ಟು 55 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ವಿತರಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಯೂಸುಫ್ ಕರಂದಾಡಿ, ಅಹ್ಮದ್ ಕಬೀರ್, ಎಸ್ಕೆಎಸ್ಸೆಸ್ಸೆಫ್ ಆಲಾಡಿ ಶಾಖಾಧ್ಯಕ್ಷ ಅಬ್ದುಲ್ ಹಕೀಂ ಇಂದಿರಾನಗರ, ಉಪಾಧ್ಯಕ್ಷ ಅಕ್ಬರ್ ಪೆರುವ, ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಶಾಖಾಧ್ಯಕ್ಷ ಇಕ್ಬಾಲ್ ಮಲಾಯಿಬೆಟ್ಟು, ಉಪಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಅಬ್ದುಲ್ ಕರೀಂ, ಕೋಶಾಧಿಕಾರಿ ಅಹ್ಮದ್ ಬಾವಾ ಅಂಗಡಿ, ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಬದ್ರುದ್ದೀನ್ ಎಂ., ಪ್ರಮುಖರಾದ ಬದ್ರುದ್ದೀನ್ ಶಾರದಾ ನಗರ, ಅಬ್ದುಲ್ ರಹಿಮಾನ್ ಕೇಕ್‍ನರಬೆಟ್ಟು, ಕೆ. ಮುಹಮ್ಮದ್ ಉದ್ದೊಟ್ಟು, ಯೂಸುಫ್ ವರಕಾಯಿ, ದಿವಾಕರ, ಲೋಕೇಶ್, ಜಗನ್ನಾಥ ಶೆಟ್ಟಿ ಪರಾರಿ, ಇಬ್ರಾಹಿಂ ಮಲಾಯಿಬೆಟ್ಟು, ರಫೀಕ್ ಕರಂದಾಡಿ, ಯೂನುಸ್ ಗೊಬ್ಬರಗುಡ್ಡೆ, ಬಶೀರ್ ಆಲಾಡಿ, ಇಬ್ರಾಹಿಂ ಶಾರದಾನಗರ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment