ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಕ್ಕೆಪದವು ಅಂಬೇಡ್ಕರ್ ಯುವಕ ಸಂಘದ ಬಿ.ಅರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಹಾಗೂ 70 ಕುಟುಂಬಗಳಿಗೆ ದಿನ ಬಳಕೆಯ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಅಂಬೇಡ್ಕರ್ ಯುವಕ ಸಂಘದ ಅದ್ಯಕ್ಷ ರಾಜೀವ್ ಕಕ್ಕೆಪದವು ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು. ಎಲ್ಲರೂ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಅಂಬೇಡ್ಕರ್ ಅವರನ್ನು ನೆನಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಅಣ್ಣು ಕಂಡಿಗ, ಮಾಯಿಲಪ್ಪ ಸಾಲ್ಯಾನ್, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಅಣ್ಣಿ, ಜನಾರ್ದನ, ಕಿಶನ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಂಘದ ವತಿಯಿಂದ ಮನೆ ಮನೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ ವಿತರಣೆ ಮಾಡಲಾಯಿತು.
0 comments:
Post a Comment