ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ವಿರೋಧಿ ಒಗ್ಗಟ್ಟು ಪ್ರದರ್ಶಿಸಲು ಭಾನುವಾರ ರಾತ್ರಿ ಪ್ರಧಾನಿ ಮೊಂಬತ್ತಿ ಬೆಳಗಲು ಸೂಚಿಸಿದ ಬಗ್ಗೆ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು-ಪ್ರತಾನಗರದಲ್ಲಿ ಕೆಲವರು ಅಲ್ಪಸಂಖ್ಯಾತ ಮನೆಗಳನ್ನು ಗುರಿಯಾಗಿಸಿ ಸಿಡಿಮದ್ದು, ಕಲ್ಲು ಎಸೆಯುವ ಮೂಲಕ ಒಗ್ಗಟ್ಟು ವಿಭಾಗಿಸುವ ಕೃತ್ಯವನ್ನು ಕಿಡಿಗೇಡಿಗಳು ನಡೆಸಿದ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರಿಕೊಂಡಿದ್ದಾರೆ.
ಪ್ರಧಾನಿ ಮೋದಿ ಕರೆಯಂತೆ ಇಲ್ಲಿನ ಕೆಲ ನಿವಾಸಿಗಳು ಭಾನುವಾರ ರಾತ್ರಿ ಮೊಂಬತ್ತಿ ಬೆಳಗಿಸಿದ್ದು, ಬಳಿಕ ಪರಿಸರದ ಅಲ್ಪಸಂಖ್ಯಾತ ನಿವಾಸಿಗಳ ಮನೆಗಳತ್ತ ಸಿಡಿಮದ್ದು ಎಸೆದಿದ್ದರು ಎನ್ನಲಾಗಿದ್ದು, ರಾತ್ರಿ ಸುಮಾರು 11 ಗಂಟೆಯ ಬಳಿಕ ಕೆಲ ಅಲ್ಪಸಂಖ್ಯಾತ ಮನೆಗಳನ್ನು ಗುರಿಯಾಗಿಸಿ ಕಲ್ಲೆಸೆತ ಕೂಡಾ ನಡೆಸಲಾಗಿದೆ ಎಂದು ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರಿಕೊಂಡಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ರಾತ್ರಿಯೇ ಸ್ಥಳ ಪರಿಶೀಲನೆ ನಡೆಸಿದ್ದು, ಲಿಖಿತ ದೂರು ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
0 comments:
Post a Comment