ನವದೆಹಲಿ (ಕರಾವಳಿ ಟೈಮ್ಸ್) : ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದೆ. ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಒಟ್ಟಾರೆ 138 ಕಾನೂನುಗಳಿಗೆ ತಿದ್ದುಪಡಿ ತರಲಾಗಿದ್ದು, ಈ ಸಂಬಂಧ ಎ 1 ರಂದು ಸರ್ಕಾರ ಹೊರಡಿಸಿದ ಗೆಝೆಟ್ ನೋಟಿಫಿಕೇಶನ್ ಪ್ರಕಾರ, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ರಾಜ್ಯ ಶಾಸಕಾಂಗ ಸದಸ್ಯರ ಪಿಂಚಣಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಪಿಂಚಣಿ ಮೊತ್ತವನ್ನು ತಿಂಗಳಿಗೆ 50,000 ದಿಂದ 75,000 ರೂಗಳಿಗೆ ಏರಿಕೆ ಮಾಡಲಾಗಿದೆ.
ಇನ್ನು ಇದೇ ವೇಳೆ ಕಾಯ್ದೆಯ ಸೆಕ್ಷನ್ 3-ಸಿಗೆ ತಿದ್ದುಪಡಿ ತರಲಾಗಿದ್ದು, ಸಿಎಂಗಳಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತುಗಳನ್ನು ವಾಪಸ್ ಪಡೆಯಲಾಗಿದೆ. ಈ ಪೈಕಿ ಬಾಡಿಗೆ ರಹಿತ ವಸತಿ ಸೌಕರ್ಯಗಳು ಹಾಗೂ ವಾರ್ಷಿಕವಾಗಿ ವಾಸಸ್ಥಳದ ನವೀಕರಣಕ್ಕೆ ನೀಡಲಾಗುತ್ತಿದ್ದ 35 ಸಾವಿರ ರೂಪಾಯಿಗಳ ಸೌಲಭ್ಯ, ವಾರ್ಷಿಕವಾಗಿ 48 ಸಾವಿರ ರೂಪಾಯಿ ಮೌಲ್ಯದ ಉಚಿತ ಕರೆಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ವಾಪಸ್ ಪಡೆಯಲಾಗಿದೆ.
ತಿದ್ದುಪಡಿಯಾದ ನಂತರ ಮುಖ್ಯಮಂತ್ರಿಗಳಿಗೆ ಮಾತ್ರವಷ್ಟೇ ಭದ್ರತೆ ನೀಡಲಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿಗಳೊಂದಿಗೆ ಅವರ ಕುಟುಂಬ ಸದಸ್ಯರಿಗೂ ಭದ್ರತೆ ನೀಡಲಾಗುತ್ತಿತ್ತು.
0 comments:
Post a Comment