ನವದೆಹಲಿ (ಕರಾವಳಿ ಟೈಮ್ಸ್) : ಕೋವಿಡ್-19 ನಿಂದ ಏಕಾಏಕಿ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಮುದ್ರಣ ಮಾಧ್ಯಮ ಉದ್ಯಮಕ್ಕೆ ಸರಕಾರ ಉತ್ತೇಜನ ನೀಡಬೇಕು ಎಂದು ಭಾರತೀಯ ಪತ್ರಿಕೆಗಳ ಸೊಸೈಟಿ (ಐಎನ್‍ಎಸ್) ಒತ್ತಾಯಿಸಿದೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ಸೊಸೈಟಿ, ಮುದ್ರಣ ಮಾಧ್ಯಮದ ಮೇಲೆ ಇರುವ ಶೇಕಡಾ 6ರ ಸುಂಕ ತೆರಿಗೆ, ಮುದ್ರಣ ಸಂಸ್ಥೆಗಳ ಮೇಲಿನ ಎರಡು ವರ್ಷಗಳ ರಜಾ ತೆರಿಗೆ, ಬ್ಯೂರೊ ಆಫ್ ಔಟ್ ರೀಚ್ ಅಂಡ್ ಕಮ್ಯುನಿಕೇಷನ್ ಜಾಹಿರಾತು ದರವನ್ನು ಶೇಕಡಾ 50ರಷ್ಟು ಹೆಚ್ಚಿಸುವುದು ಮತ್ತು ಮುದ್ರಣ ಮಾಧ್ಯಮಗಳ ಬಜೆಟ್ ವೆಚ್ಚವನ್ನು ಶೇಕಡಾ 100ರಷ್ಟು ಹೆಚ್ಚಿಸುವಂತೆ ಕೋರಿದೆ.
ಬಿಒಸಿ ಮತ್ತು ಇತರ ರಾಜ್ಯ ಸರಕಾರಗಳಿಂದ ಜಾಹಿರಾತುಗಳಿಂದ ಬರಬೇಕಾಗಿರುವ ಹಣವನ್ನು ಕೇಂದ್ರ ಸರಕಾರ ಶೀಘ್ರ ಬಿಡುಗಡೆಗೊಳಿಸುವಂತೆ ಕೋರಿದೆ. ಮುದ್ರಣ ಮಾಧ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದು, ಪುನಶ್ಚೇತನಕ್ಕೆ ಕೇಂದ್ರ ಸರಕಾರ ನೆರವಿಗೆ ಬರಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
0 comments:
Post a Comment