ಬಂಟ್ವಾಳ (ಕರಾವಳಿ ಟೈಮ್ಸ್) : ನಿನ್ನೆ ರಾತ್ರಿ ಬೆಂಗಳೂರಿನಿಂದ ಬಂದ ರೋಗಿಯೊಬ್ಬರಿಗೆ ತುರ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಗೆ
AIKMCC Ambulance ನ ಮೂಲಕ ಸಾಗಬೇಕಿತ್ತು. ಈ ಸಂದರ್ಭಧಲ್ಲಿ ಪೋಲೀಸರು ಅರ್ಕುಳ ಬಳಿ ಆಂಬುಲೆನ್ಸ್ ಗೆ ತಡೆ ನೀಡಿದ್ದರು.
ಈ ಸಂದರ್ಭ ವಿಷಯ ತಿಳಿದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ವಿದ್ಯಾರ್ಥಿ ಸಂಘದ (MSF) ಅಧ್ಯಕ್ಷ ಇಶ್ರಾರ್ ಗೂಡಿನಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಅವರಿಗೆ ಕರೆ ಮಾಡಿದ್ದಾರೆ. ಮಧ್ಯರಾತ್ರಿ ಸುಮಾರು 2 ಗಂಟೆಯ ಸಮಯದಲ್ಲೂ ತಕ್ಷಣ ಸ್ಪಂದಿಸಿದ ಹಾಶಿರ್ ಪೇರಿಮಾರ್ ಆಟೋ ರಿಕ್ಷಾದ ಮೂಲಕ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದಿದ್ದಾರೆ..
ಈ ಸಂದರ್ಭ ಅವರಿಗೆ ಆಟೋ ರಿಕ್ಷಾ ಚಾಲಕ ಜಾಬೀರ್ ಪೇರಿಮಾರ್ ಹಾಗೂ ಅಬ್ದುಲ್ ಸಮದ್ ಬಾಲ್ಡಬೊಟ್ಟು ಸಹಕರಿಸಿದ್ದಾರೆ.
0 comments:
Post a Comment