ಹಂಝ ಬಸ್ತಿಕೋಡಿ
ಮಾಲಕರು, ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೆಲ್ಸ್
|
ಬಂಟ್ವಾಳ (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ವ್ಯಾಪಿಸಿ ಎಲ್ಲರನ್ನೂ ಭಯಭೀತರನ್ನಾಗಿಸಿರುವ ಕೊರೋನ ಮಹಮಾರಿಯಿಂದ ಎಲ್ಲರ ಜೀವನವು ಕಷ್ಟಕರವಾಗಿದೆ. ದಿನ ಕೂಲಿಯಿಂದ ದಿನ ದೂಡುವ ಅದೆಷ್ಟೊ ಕಾರ್ಮಿಕರ ಕುಟುಂಬಗಳು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಹೋಟೇಲ್ ಕಾರ್ಮಿಕರ ಬದುಕೇ ಆಯೋಮಯಗೊಂಡಿದೆ.
ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರ ಜಾರಿಗೊಳಿಸಿರುವ ಲಾಕ್ ಡೌನ್ ಕಾರಣದಿಂದ ಅದೆಷ್ಟೊ ಹೋಟೇಲ್ ಗಳು ಮುಚ್ಚಿವೆ. ಹೋಟೇಲ್ ಗಳಲ್ಲಿ 85% ಕಾರ್ಮಿಕರು ಹೊರ ರಾಜ್ಯಗಳಿಂದ ಬಂದವರಾಗಿರುತ್ತಾರೆ. ಅವರ ಜೀವನವಂತೂ ತುಂಬಾ ಕಷ್ಟಕರವಾಗಿರುತ್ತದೆ. ಅತ್ತ ಊರಿಗೂ ಹೋಗಲಾಗದಂತಹ ಪರಿಸ್ಥಿತಿ , ಇತ್ತ ವರಮಾನವೂ ಇಲ್ಲ. ಕೆಲವೊಂದು ಹೋಟೇಲ್ ಗಳ ಮಾಲಿಕರು ಆರ್ಥಿಕವಾಗಿ ಪ್ರಬಲವಾಗಿರುತ್ರಾರೆ. ಅವರುಗಳು ತಮ್ಮ ಕಾರ್ಮಿಕರ ಖರ್ಚು ವೆಚ್ಚಗಳನ್ನು ನೋಡುತ್ತಾರೆ. ಆದರೆ ತನ್ನ ಹೋಟೇಲಿನಿಂದ ಮಾತ್ರ ಬರುವ ವರಮಾನದಿಂದ ಜೀವನ ಸಾಗಿಸುವ ಅದೆಷ್ಟೊ ಹೋಟೇಲ್ ಮಾಲಿಕರ ಕಷ್ಟಗಳು ಹೇಳಿ ತೀರದ್ದು. ಹೋಟೇಲ್ ಬಾಡಿಗೆ, ಕಾರ್ಮಿಕರ ರೂಮ್ ಬಾಡಿಗೆ , ಕಾರ್ಮಿಕರ ದೈನಂದಿನ ಖರ್ಚು ವೆಚ್ಚಗಳು , ಬ್ಯಾಂಕ್ ಇಎಂಐ ,ಇನ್ನಿತರ ಖರ್ಚುಗಳು, ಯಾವುದೇ ವರಮಾನವಿಲ್ಲದೇ ಇದೆಲ್ಲ ಖರ್ಚು ಭರಿಸಲು ಹೇಗೆ ತಾನೆ ಸಾಧ್ಯ.? ಆದುದರಿಂದ ಲಾಕ್ ಡೌನ್ ಮುಗಿಯುವವರೆಗೆ ಹೋಟೆಲ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ರಾಜ್ಯದ ಹಾಗೂ ಹೊರ ರಾಜ್ಯದ ಕಾರ್ಮಿಕರಿಗೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬಡ ಕಾರ್ಮಿಕರ ಹಿತ ಕಾಯಬೇಕಾಗಿದೆ.
0 comments:
Post a Comment