ಮಂಗಳೂರು (ಕರಾವಳಿ ಟೈಮ್ಸ್) : ಸ್ಥಳೀಯವಾಗಿ ಲಭ್ಯ ಇರದ, ಅತೀ ಅಗತ್ಯವಾಗಿ ಬೇಕಾಗಿರುವ ಔಷಧಿ, ಮೆಡಿಸಿನ್‍ಗಳನ್ನು ಮಂಗಳೂರಿನಿಂದ ತರಿಸಿಕೊಡುವ ವ್ಯವಸ್ಥೆಯನ್ನು ಗುರುಪುರ ಕೈಕಂಬ ವಲಯದ 5 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ಹಮ್ಮಿಕೊಂಡಿದೆ.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಮೆಡಿಚೈನ್ ಮೂಲಕ ಮೆಡಿಚೈನ್ ಕೈಕಂಬ, ಮೆಡಿಚೈನ್ ಎಸ್ಕೆಎಸ್ಸೆಸ್ಸೆಫ್, ವಿಖಾಯ ಘಟಕ ಈ ಸೇವೆಯ ನೇತೃತ್ವ ವಹಿಸಲಿದ್ದು, ಮಂಗಳೂರು-ಬಿ ಸಿ ರೋಡ್ ಕೈಕಂಬ, ಗುರುಪುರ ಕೈಕಂಬ, ಗಂಜಿಮಠವರೆಗಿನ ಪ್ರದೇಶಗಳಿಗೂ ಮೆಡಿಚೈನ್ ಮೂಲಕ ಔಷಧಿ ತರಿಸಿಕೊಡಲಾಗುವುದು. ಅಗತ್ಯ ಇದ್ದವರು ಎಸ್ಕೆಎಸ್ಸೆಸ್ಸೆಫ್ ವಿಖಾಯ ಕೈಕಂಬ ಸಂಪರ್ಕಿಸಬಹುದಾಗಿದೆ ಎಂದು ಕೈಕಂಬ ವಲಯ ವಿಖಾಯ ಸಂಚಾಲಕ ಇಬ್ರಾಹಿಂ ಕುಕ್ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment