ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖಾಧ್ಯಕ್ಷ ಲತೀಫ್ ಖಾನ್ ಗೂಡಿನಬಳಿ |
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ಪ್ರದೇಶದಿಂದ ಅನಿವಾಸಿಗರಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಪ್ರವಾಸಿ ಮಿತ್ರರ ಸಂಘಟನೆ ಗೂಡಿನಬಳಿ ಗಲ್ಫ್ ವೆಲ್ಫೇರ್ ಎಸೋಸಿಯೇಶ್ ವತಿಯಿಂದ ಲಾಕ್‍ಡೌನ್ ಅವಧಿಯಲ್ಲಿ ಪರಿಸರದ ಜನರಿಗೆ ಅಗತ್ಯ ನೆರವು ನೀಡಲಾಗಿದ್ದು, ಸಂಘಟನೆಯ ಸದಸ್ಯರ ಸಕಾಲಿಕ ನೆರವಿಗಾಗಿ ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖಾಧ್ಯಕ್ಷ ಲತೀಫ್ ಖಾನ್ ಗೂಡಿನಬಳಿ ಅಭಿನಂದನೆ ಸಲ್ಲಿಸಿದ್ದಾರೆ.
ಎಸೋಸಿಯೇಶನ್ ವತಿಯಿಂದ ಗೂಡಿನಬಳಿ ಪರಿಸರದ ಸುಮಾರು 370 ಕ್ಕೂ ಹೆಚ್ಚು ಮನೆಗಳಿಗೆ ಅಗತ್ಯ ಸಾಮಾಗ್ರಗಳನ್ನೊಳಗೊಂಡ ಕಿಟ್ ಒದಗಿಸಲಾಗಿದ್ದು, ಜನರ ಸಂಕಷ್ಟದಲ್ಲಿ ಸ್ಪಂದಿಸಲಾಗಿದ್ದು ಅತ್ಯಂತ ಮಹತ್ವದ ಕಾರ್ಯ ಎಂದು ಶ್ಲಾಘಿಸಿದ ಲತೀಫ್ ಖಾನ್ ಗಲ್ಫ್ ವೆಲ್ಫೇರ್ ಎಸೋಸಿಯೇಶನ್ ಹಿಂದಿನಿಂದಲೂ ಗೂಡಿನಬಳಿ ಪರಿಸರದ ಎಲ್ಲಾ ಅಭಿವೃದ್ದಿ ಕಾರ್ಯಗಳು, ಪರಿಸರದ ಬಡವರ ಏಳಿಗೆ, ರೋಗಿಗಳಿಗೆ ಹಣಕಾಸಿನ ನೆರವು ಮೊದಲಾದ ಸಾಮಾಜಿಕ ಸಾಮುದಾಯಿಕ ಸೇವೆಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ಗೂಡಿನಬಳಿ ಮಸೀದಿಯ ಎಲ್ಲ ರೀತಿಯ ಅಗತ್ಯ ಕಾರ್ಯಗಳಿಗೂ ಗರಿಷ್ಠ ಮಟ್ಟದ ನೆರವನ್ನು ನೀಡಿರುತ್ತಾರೆ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ಗೂಡಿನಬಳಿ ಪರಿಸದರ ಜನತೆಯ ಹಸಿವನ್ನು ನೀಗಿಸುವ ಉದ್ದೇಶದಿಂದ ರೇಶನ್ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮತ್ತೊಮ್ಮೆ ಮಾನವೀಯ ಸೇವೆಗೈದಿರುವುದು ಎಲ್ಲ ರೀತಿಯಲ್ಲೂ ಅಭಿನಂದನೆ ಅರ್ಹವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಲತೀಫ್ ಖಾನ್ ಯುವಕರ ಸೇವೆಗೆ ಹ್ಯಾಟ್ಸಪ್ ಎಂದಿದ್ದಾರೆ.
0 comments:
Post a Comment