ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ನಿಗ್ರಹದ ಹಿನ್ನಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವ ಕಾರಣಕ್ಕೆ ಎ. 14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿತ್ತು. ಆದರೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಹಾರಾಟಗಳಿಗೆ ಟಿಕೆಟ್ ಬುಕ್ಕಿಂಗನ್ನು ಎ.30ರವರೆಗೂ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಇದು ಲಾಕ್‍ಡೌನ್ ಅವಧಿಯ ಬಳಿಕವೂ ಮತ್ತೆ ಒಂದು ವಾರದ ಅವಧಿಯ ವಿಸ್ತರಣೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತಷ್ಟು ದಿನಗಳ ಕಾಲ ಎಲ್ಲಾ ರೀತಿಯ ವಿಮಾನಯಾನ ಸೇವೆಗಳನ್ನು ನಿಷೇಧಿಸಬಹುದು ಎಂಬ ವದಂತಿಗಳು ಹರಡಲು ಕಾರಣವಾಗಿದೆ.
ಇಂಡಿಗೋ ವಕ್ತಾರರು ಮಾತನಾಡಿ, ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್‍ಗಳನ್ನು ನಿಷೇಧಿಸಲಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿನ ವಾಣಿಜ್ಯ ವಿಮಾನಗಳನ್ನು ಎಪ್ರಿಲ್ 14ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ವಕ್ತಾರ ಮಾತನಾಡಿ, ಏಪ್ರಿಲ್ 3 ರಿಂದ ಏಪ್ರಿಲ್ 30ರವರೆಗೂ ಎಲ್ಲಾ ವಿಮಾನ ಬುಕ್ಕಿಂಗ್‍ಗಳನ್ನು ನಿಷೇಧಿಸಲಾಗಿದೆ. ಏಪ್ರಿಲ್ 14ರ ಬಳಿಕ ವಿಮಾನಯಾನ ಸಚಿವಾಲಯದ ನಿರ್ಧಾರದ ಕುರಿತು ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
0 comments:
Post a Comment