ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಂಡಸಾಲೆ ಎಂಬಲ್ಲಿನ ಪಲ್ಗುಣಿ ನದಿಗೆ ಶುಕ್ರವಾರ ಸ್ನಾನಕ್ಕೆಂದು ತೆರಳಿದ ಅರಳ ಗ್ರಾಮದ ತಡ್ಯಾಳ ನಿವಾಸಿ ತಿಮ್ಮಪ್ಪ ಪೂಜಾರಿ (70) ಅವರು ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ತನ್ನ ಮೊಮ್ಮಗ ನಿತಿನ್ ಜೊತೆ ಬಂಡಶಾಲೆ ಪಲ್ಗುಣಿ ನದಿಗೆ ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಲೆಂದು ತೆರಳಿದ್ದ ಇವರು ನೀರಿನಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಈ ಸಂದರ್ಭ ಮೊಮ್ಮಗ ಮನೆಗೆ ತಕ್ಷಣ ಓಡಿ ಬಂದು ಮನೆ ಮಂದಿಗೆ ವಿಷಯ ತಿಳಿಸಿದ್ದಾನೆ. ಆದರೆ ಅದಾಗಲೇ ಅವರು ಮುಳುಗಿ ಮೃತಪಟ್ಟಿದ್ದರು.
ಬಳಿಕ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಾಟ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment