ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಮುಖ್ಯಪೇಟೆಯ ರಥಬೀದಿ ನಿವಾಸಿ ಮಹಿಳೆಯೋರ್ವರು ಭಾನುವಾರ ಕೋವಿಡ್-19 ಸೋಂಕಿನಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಅವರು ಚಿಕಿತ್ಸೆ ಪಡೆದ ವೈದ್ಯ ನವದುರ್ಗಾ ಕ್ಲಿನಿಕ್‍ನ ಡಾ ಸದಾಶಿವ ಶೆಣೈ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯ ಗಂಡ ಹಾಗೂ ಮಗನನ್ನು ವಿಚಾರಿಸಿದ ಸಂದರ್ಭ ಮೃತ ಮಹಿಳೆ ನಿಮೋನಿಯ (ಶ್ವಾಸಕೋಶದ) ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಅನೇಕ ಕಡೆ ಚಿಕಿತ್ಸೆ ಕೊಡಿಸಿದರು ನಿಮೋನಿಯ ಖಾಯಿಲೆ ವಾಸಿಯಾಗದ ಕಾರಣ ಎಪ್ರಿಲ್ 15 ರಂದು ಜ್ವರದಿಂದ ಬಳಲುತ್ತಿದ್ದಕ್ಕಾಗಿ ಚಿಕಿತ್ಸೆಗಾಗಿ ನವದುರ್ಗಾ ಕ್ಲಿನಿಕ್‍ನ ಡಾ. ಸದಾಶಿವ ಶೆಣೈ ಅವರಲ್ಲಿಗೆ ಕರೆದುಕೊಂಡು ಹೋಗಲಾಗಿರುತ್ತದೆ ಎಂದು ಹೇಳಿಕೆ ನೀಡಿರುತ್ತಾರೆ.
ಕೆಪಿಎಂಇ ಕಾಯ್ದೆ ಪ್ರಕಾರ ಎಲ್ಲಾ ಸಾಂಕ್ರಾಮಿಕ ಖಾಯಿಲೆಗಳನ್ನು ವೈದ್ಯರುಗಳು ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ನೀಡಬೇಕಾಗಿದ್ದು. ಸದ್ರಿ ಡಾ ಸದಾಶಿವ ಶೈಣೈ ಅವರು ನಾಲ್ಕು ದಿನಗಳ ಚಿಕಿತ್ಸೆಯನ್ನು ನೀಡಿದ್ದು, ರೋಗ ಉಲ್ಬಣಗೊಂಡರೂ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ನಿರ್ದೆಶನ ನೀಡಿರುವುದಿಲ್ಲ. ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ. ದೇಶದಾದ್ಯಂತ ತುರ್ತು ಘೋಷಿಸಿ ಪ್ರಾಣ ನಿರೋಧಕ ನಿರ್ಬಂಧಧ ನಿಯಮವೆಂದು ತಿಳಿದು ಕೂಡ ಜವಾಬ್ದಾರಿಯುತ ವೈಧ್ಯಾಧಿಕಾರಿಯಾಗಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡದೆ ವೈದ್ಯಕೀಯ ಸೇವೆಯಲ್ಲಿ ಕೋವಿಂಡ್-19 ಕೋರೋನ ಸೋಂಕು ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ್ದರಿಂದ ಮಹಿಳೆಯು ಕೋವಿಂಡ್-19 ಕೋರೋನ ಸೊಂಕಿನಿಂದ ಮೃತಪಡಲು ಕಾರಣವಾಗಿರುತ್ತಾರೆ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಬಂಟ್ವಾಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಆರೋಗ್ಯಾಧಿಕಾರಿ ನೀಡಿದ ದೂರಿನಂತೆ ಕೋವಿಂಡ್-19 ಕೋರೋನ ಸೋಂಕು ಸಾಂಕ್ರಮಿಕ ಖಾಯಿಲೆ ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ ನವದುರ್ಗಾ ಕ್ಲಿನಿಕ್‍ನ ಡಾ ಸದಾಶಿವ ಶೆಣೈ ವಿರುದ್ಧ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 269, 270, ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment