ನಿರ್ಗತಿಕರಿಗೆ ಆಹಾರ ನೀಡಿ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್ : ಅಜ್ಮೀರ್ ಡೀಸಿ ಎಚ್ಚರಿಕೆಗೆ ವ್ಯಾಪಕ ಪ್ರಶಂಸೆ - Karavali Times ನಿರ್ಗತಿಕರಿಗೆ ಆಹಾರ ನೀಡಿ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್ : ಅಜ್ಮೀರ್ ಡೀಸಿ ಎಚ್ಚರಿಕೆಗೆ ವ್ಯಾಪಕ ಪ್ರಶಂಸೆ - Karavali Times

728x90

10 April 2020

ನಿರ್ಗತಿಕರಿಗೆ ಆಹಾರ ನೀಡಿ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್ : ಅಜ್ಮೀರ್ ಡೀಸಿ ಎಚ್ಚರಿಕೆಗೆ ವ್ಯಾಪಕ ಪ್ರಶಂಸೆ


ಜನ ಸ್ವಯಂ ನಿಯಂತ್ರಣಕ್ಕೆ ಬರದಿದ್ದಾಗ ಅಧಿಕಾರಿಗಳು ಕಾನೂನು ಕ್ರಮದ ಮೂಲಕ ನಿಯಂತ್ರಿಸುವುದು ಉತ್ತಮ ಬೆಳವಣಿಗೆ


ಅಜ್ಮೀರ್ (ಕರಾವಳಿ ಟೈಮ್ಸ್) : ನಿರ್ಗತಿಕರಿಗೆ ಆಹಾರ ಅಥವಾ ಅಗತ್ಯ ಸಾಮಾಗ್ರಿ ನೀಡುವಾಗ ಸೆಲ್ಫಿ ತೆಗೆಯುವುದು ವಿಡಿಯೋ ಮಾಡುವುದು ಮಾಡಿ ಬಡವರ ಮಾನ ಹರಾಜಾಕಿದರೆ ಸುಮ್ಮನಿರಲ್ಲ. ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕೊರೊನಾ ವೈರಸ್ ಭೀತಿಗೆ ದೇಶ ಲಾಕ್‍ಡೌನ್ ಆಗಿ 15ಕ್ಕೂ ಹೆಚ್ಚಿನ ದಿನಗಳಾಗಿವೆ. ಈ ನಡುವೆ ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಮಾಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ, ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪೆÇ್ರೀತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಊಟವಿಲ್ಲದವರಿಗೆ ಆಹಾರ ನೀಡಿ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೆ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಜೊತೆಗೆ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ವಾರ್ನಿಂಗ್ ನೀಡಿದ್ದಾರೆ.

ಕಳೆದ 16 ದಿನಗಳಿಂದ ದೇಶದಲ್ಲಿ ಹಲವಾರು ಜನರು ಸಂಸ್ಥೆಗಳು ಸೆಲೆಬ್ರಿಟಿಗಳು ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿವೆ. ಆದರೆ ಇದರ ಜೊತೆ ಕೆಲ ಜನರು ಮಾಡಿರುವ ಸಹಾಯವನ್ನು ಫೋಟೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜ್ಮೀರ್ ಜಿಲ್ಲೆಯಲ್ಲಿ ಆಹಾರವಿಲ್ಲದವರಿಗೆ ಎರಡು ಬಾಳೆಹಣ್ಣು ನೀಡಿ ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ಡಿಸಿ ಈ ಆದೇಶ ಹೊರಡಿಸಿದ್ದಾರೆ.

ಅಜ್ಮೀರ್ ಜಿಲ್ಲಾಧಿಕಾರಿಗಳ ಈ ಕಠಿಣ ನಿರ್ಧಾರಕ್ಕೆ ಇದೀಗ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನ್ನಾಹಾರ ಪಾನೀಯಗಳನ್ನು ನೀಡುವ ಮೂಲಕ ಕೆಲ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳು ಬಡವರ, ನಿರ್ಗತಿಕರ ಅನಿವಾರ್ಯತೆಯನ್ನೇ ಬಂಡವಾಳವಾಗಿಸಿಕೊಂಡು ಅವರ ಫೋಟೋ, ವೀಡಿಯೋ ಮಾಡಿಕೊಳ್ಳುವುದಲ್ಲದೆ, ಅವರ ಜೊತೆ ತಮಗೆ ಬೇಕಾದಂತೆ, ತಮ್ಮ ಹಿತ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ ಮಾತನಾಡಿಸಿ ಅದನ್ನು ವೀಡಿಯೋ ಸೆರೆ ಹಿಡಿದು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವ ಮೂಲಕ ಬಡವರ ಮಾನ-ಅಭಿಮಾನವನ್ನು ಮೂರಾಬಟ್ಟೆ ಮಾಡುತ್ತಿರುವ ಬಗ್ಗೆ ನಾಗರಿಕ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಅಜ್ಮೀರ್ ಡೀಸಿ ಇಂತಹ ದಿಟ್ಟ ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಜನ ಸ್ವಯಂ ನಿಯಂತ್ರಣಕ್ಕೆ ಬರದೇ ಇರುವ ಸಂದರ್ಭ ಅಧಿಕಾರಿಗಳು ಕಾನೂನು ಕ್ರಮದ ಮೂಲಕ ನಿಯಂತ್ರಿಸುವುದು ಉತ್ತಮ ಬೆಳವಣಿಗೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ನಿರ್ಗತಿಕರಿಗೆ ಆಹಾರ ನೀಡಿ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್ : ಅಜ್ಮೀರ್ ಡೀಸಿ ಎಚ್ಚರಿಕೆಗೆ ವ್ಯಾಪಕ ಪ್ರಶಂಸೆ Rating: 5 Reviewed By: karavali Times
Scroll to Top