ಮಾರಕ ವೈರಸ್ ಆತಂಕ ನಡುವೆ ಕೊಡಗು, ಹಾಸನ ಜನತೆಗೆ ಭೂಕಂಪನದ ಅನುಭವ - Karavali Times ಮಾರಕ ವೈರಸ್ ಆತಂಕ ನಡುವೆ ಕೊಡಗು, ಹಾಸನ ಜನತೆಗೆ ಭೂಕಂಪನದ ಅನುಭವ - Karavali Times

728x90

3 April 2020

ಮಾರಕ ವೈರಸ್ ಆತಂಕ ನಡುವೆ ಕೊಡಗು, ಹಾಸನ ಜನತೆಗೆ ಭೂಕಂಪನದ ಅನುಭವ



ಹಾಸನ/ಕೊಡಗು (ಕರಾವಳಿ ಟೈಮ್ಸ್) : ಕೊರೊನಾ ಆತಂಕದ ನಡುವೆ ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಭೂಮಿ ಕಂಪಿಸಿರುವ ಅನುಭವವಾಗಿದೆ.

    ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ ಜನ ಭಯಭೀತರಾಗಿದ್ದಾರೆ. ಕಾಳೇನಹಳ್ಳಿ, ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಶುಕ್ರವಾರ ಸಂಜೆ 5.20ರ ವೇಳೆಗೆ ಭೂಮಿ ಕಂಪಿಸಿ ನಡುಗಿದ ಅನುಭವವಾಗಿದ್ದು, ಮೊದಲೇ ಕೊರೋನಾ ಆತಂಕದಲ್ಲಿದ್ದ ಜನ ಹೆದರಿ ತಕ್ಷಣ ಮನೆಯಿಂದ ಹೊರಗೋಡಿ ಬಂದಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿರುವ ಅನುಭವವಾಗಿದೆ. ಕೊರೊನಾ ಭೀತಿಯ ನಡುವೆ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಲ್ಲದೇ ಮೈಸೂರು-ಹಾಸನ ಭಾಗವಾದ ಕೆ.ಆರ್. ನಗರ, ಅರಕಲಗೂಡು ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವಾಗಿದೆ. ಸಂಜೆ 5.30ಕ್ಕೆ ಹಾರಂಗಿ, ಬೆಂಗಳೂರು ಸಿಸ್ಮೋಗ್ರಾಫ್ ಕೇಂದ್ರಗಳಲ್ಲಿ 2.6ರ ತೀವ್ರತೆ ದಾಖಲಾಗಿದೆ ಎಂದು ಆಣೆಕಟ್ಟು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮಾರಕ ವೈರಸ್ ಆತಂಕ ನಡುವೆ ಕೊಡಗು, ಹಾಸನ ಜನತೆಗೆ ಭೂಕಂಪನದ ಅನುಭವ Rating: 5 Reviewed By: karavali Times
Scroll to Top