ಬಂಟ್ವಾಳ (ಕರಾವಳಿ ಟೈಮ್ಸ್) : ಜಿಲ್ಲಾಧಿಕಾರಿಯವರ ಆದೇಶದಂತೆ ಸಜಿಪನಡು ಗ್ರಾಮದ ನಿಯಂತ್ರಿತ ವಲಯಕ್ಕೆ ಘಟಕ ನಿಯಂತ್ರಿಕ ಅಧಿಕಾರಿ ಬಂಟ್ವಾಳ ತಾ.ಪಂ. ಕಾಯ೯ ನಿವಾ೯ಹಕ ಅಧಿಕಾರಿ ರಾಜಣ್ಣ ಅವರು ಇಲ್ಲಿನ ಗ್ರಾಮ ಪಂಚಾಯತ್ ಕಛೇರಿ ಗೆ ಭೇಟಿ ನೀಡಿದರು.
ಗ್ರಾಮದ ವಿವಿಧ ಪ್ರದೇಶಗಳ ಬಗ್ಗೆ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಈಗಾಗಲೇ ಕೋವಿಡ್-19 ಪ್ರಕರಣದ 28 ದಿನದ ಅವಧಿ ಮುಕ್ತಾಯವಾಗಿದ್ದು, ಗ್ರಾಮ ಸೀಲ್ ಡೌನ್ ಆಗಿರುತ್ತದೆ. ಜಿಲ್ಲಾಧಿಕಾರಿಯವರ ನಿದೇ೯ಶನ ಬರುವವರೆಗೂ ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
0 comments:
Post a Comment