ಕೊರೋನಾ ಭಯಪಡುವ ಬದಲು ಜಾಗೃತರಾಗಬೇಕಿದೆ : ಹಂಝ ಬಸ್ತಿಕೋಡಿ - Karavali Times ಕೊರೋನಾ ಭಯಪಡುವ ಬದಲು ಜಾಗೃತರಾಗಬೇಕಿದೆ : ಹಂಝ ಬಸ್ತಿಕೋಡಿ - Karavali Times

728x90

3 April 2020

ಕೊರೋನಾ ಭಯಪಡುವ ಬದಲು ಜಾಗೃತರಾಗಬೇಕಿದೆ : ಹಂಝ ಬಸ್ತಿಕೋಡಿ

ಹಂಝಬಸ್ತಿಕೋಡಿ  
ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೆಲ್ಸ್


ಚೀನಾ ದೇಶದ ವುಹಾನ ಪ್ರದೇಶದಲ್ಲಿ ಹುಟ್ಟಿ ಜಗತ್ತಿನ 230 ದೇಶಗಳಿಗೆ ವ್ಯಾಪಿಸಿ ಜಗತ್ತನ್ನೇ ಭಯ ಭೀತರನ್ನಾಗಿಸಿದ ಕರೋನಾ ಎಂಬ ಮಹಾಮಾರಿಯು ಇದೀಗ ನಮ್ಮ ದೇಶದಲ್ಲಿಯೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಜಗತ್ತಿನ ಇತರ ದೇಶಗಳಷ್ಟು ಸಾವು ನೋವುಗಳು ನಮ್ಮ ದೇಶದಲ್ಲಿ ಸಂಭವಿಸದಿದ್ದರೂ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುವುದನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಈ ಕರೋನಾ ಅಷ್ಟೊಂದು ಅಪಾಯಕಾರಿ ಎಂಬುವುದನ್ನು ಅಲ್ಲಗಳೆಯುವಂತಿಲ್ಲ.

ಕರೋನಾ ಮಹಾಮಾರಿಯಿಂದ ತತ್ತರಿಸಿ ಹೆಚ್ಚಿನ ಸಾವು ನೋವುಗಳು ಸಂಭವಿಸಿರುವ ದೇಶಗಳಲ್ಲಿ ಚೀನಾ, ಸ್ಪೇನ್, ಇಟಲಿ, ಇರಾನ್, ಅಮೇರಿಕ ಮುಂಚೂಣಿಯಲ್ಲಿದೆ. ಈ ದೇಶಗಳು ನಮ್ಮ ದೇಶಕ್ಕಿಂತಲೂ ದೊಡ್ಡ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ದೇಶಗಳು. ಆ ದೇಶಗಳು ಉಪಯೋಗಿಸುವ ಕೆಲವೊಂದು ವೈದ್ಯಕೀಯ ಉಪಕರಣಗಳು ನಮ್ಮ ದೇಶದಲ್ಲಿ ಇನ್ನೂ ಕಂಡು ಹಿಡಿದಿರಲಿಕ್ಕಿಲ್ಲ. ಅಷ್ಟೊಂದು ಸುಧಾರಿತ ಹಂತದಲ್ಲಿದೆ. ಆದರೂ ಕೂಡ ಹೆಚ್ಚಿನ ರೀತಿಯಲ್ಲಿ ಕರೋನಾ ಬಾಧಿತವಾಗಿದೆ. ಇವಕ್ಕೆಲ್ಲಾ ಕಾರಣ ಹುಡುಕಲು ಹೊರಟಾಗ ಮೊದಲನೆಯದಾಗಿ ಕಂಡುಬರುವ ಕಾರಣ ‘ಕಮ್ಯುನಿಟಿ ಸ್ಪ್ರೆಡ್ (ಸಾಮುದಾಯಿಕ ಹಡುವಿಕೆ)’ ಅಂದರೆ ಜನಾಂಗ ಹರಡುವಿಕೆ. ಈ ಕಮ್ಯುನಿಟಿ ಸ್ಪ್ರೆಡ್ ಹೇಗೆ ಬರುತ್ತದೆ ಅಂದರೆ ಜನರೆಲ್ಲಾ ಎಂದಿನಂತೆ ಮನೆಬಿಟ್ಟು ಹೊರಬಂದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ, ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಡೆ ಸೇರುವುದರಿಂದ ಅಂದರೆ ಮಾಲ್, ಮಾರ್ಕೆಟ್‍ಗಳು, ಪ್ರವಾಸಿ ತಾಣಗಳು, ಸಿನಿಮಾ ಮಂದಿರಗಳು, ಪ್ರಾರ್ಥನಾ ಮಂದಿರಗಳು, ಸರಕಾರಿ ಕಛೇರಿಗಳು, ಮದುವೆ ಸಮಾರಂಭಗಳು ಇತ್ಯಾದಿ. ಆ ದೇಶದ ಸರಕಾರಗಳು ಕರೋನಾದ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿದ್ದರೂ ಜನರು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಎಲ್ಲರೂ ಎಂದಿನಂತೆ ಪ್ರವಾಸಿ ತಾಣಗಳಲ್ಲಿ, ಬೀಚ್ ಪಾರ್ಕ್‍ಗಳಲ್ಲಿ ಸುತ್ತಾಡುತ್ತಾ, ದೂರದ ಊರಿನಲ್ಲಿರುವ ಗೆಳೆಯರನ್ನು, ಬಂಧುಗಳನ್ನು ಭೇಟಿಯಾಗುತ್ತಾ,  ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅದುವೇ ಆ ಮಟ್ಟದ ಸಾವು ನೋವುಗಳಿಗೆ ಕಾರಣವಾದಂತಿದೆ.

ಆದರೆ ನಮ್ಮ ಸರಕಾರವು ಮೊದಲೇ ಎಚ್ಚೆತ್ತುಕೊಂಡು ಈ ಕಮ್ಯುನಿಟಿ ಸ್ಪ್ರೆಡ್ ತಡೆಗಟ್ಟಲು 21 ದಿನಗಳ ಲಾಕ್‍ಡೌನ್ ಘೋಷಿಸಿದೆ. ‘ಸ್ಟೇ ಹೋಂ ಆಂಡ್ ಸ್ಟೇ ಸೇಫ್ಟಿ’ ಎಂಬ ಘೋಷಣೆಯೊಂದಿಗೆ ಮನೆಬಿಟ್ಟು ಹೊರಬಾರದಿರಿ ಎಂದು ಜನರೆನ್ನೆಲ್ಲಾ ಮನೆಯೊಳಗೆ ಬಲವಂತವಾಗಿ ಕೂರಿಸುತ್ತಿದೆ. ಮೊದ ಮೊದಲು ಇದು ವಿಫಲವಾಯಿತಾದರೂ ಕ್ರಮೇಣ ಪೆÇೀಲೀಸರ ಲಾಠಿ ರುಚಿಯ ಪರಿಣಾಮದಿಂದಲೋ ಏನೋ ಜನರೆಲ್ಲಾ ಮನೆಯೊಳಗೆ ಉಳಿಯಲು ತೀರ್ಮಾನಿಸಿದರು.  ಆದರೂ ಕರೋನಾ ಮಹಾಮಾರಿಯು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಹಾಗೂ ಕೇಂದ್ರ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಸಫಲವಾಗದೆ ಎಲ್ಲೋ ಒಂದು ಕಡೆ ಎಡವುತ್ತಿದೆ ಎಂಬುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ತುಂಬಾ ಕಡಿಮೆಯಿದೆ. ಇದು ಸಂತೋಷದ ವಿಚಾರವಾದರೂ ಅಷ್ಟೇ ಆತಂಕದ ವಿಚಾರವೂ ಹೌದು. ಕಾರಣ ಇಷ್ಟೇ, ಕರೋನಾದ ಲಕ್ಷಣಗಳು ಕಂಡು ಬಂದವರು ಕರೋನಾದ ಪರೀಕ್ಷೆ ಮಾಡಿಸುತ್ತಿದ್ದಾರೆಯೇ ಅಥವಾ ಒಂದು ತಿಂಗಳ ಐಸೋಲೇಶನ್‍ಗೆ ಹೆದರಿ ಪರೀಕ್ಷೆ ನಡೆಸದೆ ಇರಬಹುದಾ ಎಂಬ ಆತಂಕ ಮೂಡುತ್ತಿದೆ.

ಒಂದು ವೇಳೆ ಕರೋನಾ ಸೋಂಕಿತರು ರಕ್ತ ಪರೀಕ್ಷೆ ಮಾಡದೆ ಉಳಿದರೆ ಅದರಿಂದ ಆಗುವ ಅನಾಹುತಗಳು ಹಲವು. ಒಬ್ಬನಿಗೆ ಸೋಂಕು ಹರಡಿ ಅದರ ಲಕ್ಷಣಗಳು ಗೋಚರಿಸಲು 14 ದಿನಗಳು ಬೇಕಾಗುತ್ತದೆ. ಯಾವುದಾದರೂ ಒಂದು ಲಕ್ಷಣಗಳು ಕಂಡು ಬಂದಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು. ರಿಪೆÇೀರ್ಟ್ ಬರುವವರೆಗೆ ಹೋಂ ಕ್ವಾರಂಟೈನ್ ಅಥವಾ  ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿರಬೇಕು. ಒಂದು ವೇಳೆ ರಕ್ತ ಪರೀಕ್ಷೆಯಲ್ಲಿ ಸೋಂಕು ಧೃಡವಾದಲ್ಲಿ ಮರು ಚೇತರಿಕೆ ಆಗುವವರೆಗೆ ಆಸ್ಪತ್ರೆಯಲ್ಲಿ ಐಸೋಲೇಶನ್‍ನಲ್ಲಿರಬೇಕು. ಒಂದು ವೇಳೆ ಸೋಂಕು ಧೃಡಪಟ್ಟಿಲ್ಲ ಅಂತಾದರೆ ಯಾವುದೇ ಭಯ ಪಡುವ ಅವಶ್ಯಕತೆಯಿಲ್ಲ. ಮತ್ತಷ್ಟು ಜಾಗರೂಕತೆಯಿಂದ ಮನೆಯೊಳಗೆ ಇರುವುದು ಉತ್ತಮ. ಯಾಕೆಂದರೆ ಒಬ್ಬ ಮನುಷ್ಯನಿಂದ ಸುಮಾರು 2000-3000 ಜನರಿಗೆ ಹರಡುವ ಸಾಧ್ಯತೆಗಳಿವೆ. ಅಷ್ಟೂ ಜನರಲ್ಲಿ ಹೆಚ್ಚಿನವರು ನಮ್ಮ ಒಡನಾಡಿಗಳು, ಕುಟುಂಬ ಸದಸ್ಯರೇ ಆಗಿರುತ್ತಾರೆ ಎಂಬುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ.

ಕೊರೋನಾ ಸೋಂಕು ಅಷ್ಟೊಂದು ಭಯಪಡುವ ಕಾಯಿಲೆಯಲ್ಲ. ಆದರೂ ತುಂಬಾ ಜಾಗರೂಕರಾಗಿರಬೇಕಾದ ಕಾಯಿಲೆ. ಸರಕಾರವು ಜನಸಾಮಾನ್ಯರ ಹಿತಕ್ಕಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.  ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಸಂಸದರವರೆಗೆ ತಾವುಗಳು ತಮಗೆ ಮತ ಕೇಳಲು ಬಳಸುವ ಕಾರ್ಯಕರ್ತರನ್ನು ಪ್ರತಿಯೊಂದು ಮನೆ ಬಾಗಿಲಿಗೆ ಕಳುಹಿಸಿ ಕರೋನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜೊತೆಗೆ ಮಾಸ್ಕ್ , ಸ್ಯಾನಿಟೈಸರ್ ಹಾಗೂ ದಿನಬಳಕೆಯ ಅಡುಗೆ ಸಾಮಾನುಗಳನ್ನು ತಲುಪಿಸಬೇಕು. ಅದೇ ರೀತಿ ಮನೆಯೊಳಗೆ ಬರುವಾಗ ಹಾಗೂ ಮನೆಯಿಂದ ಹೊರಗೆ ಹೋಗುವಾಗ ಯಾವ ರೀತಿ ಶುಚಿತ್ವ ಕಾಪಾಡಿಕೊಳ್ಳಬೇಕು ಹಾಗೂ ಯಾವ ರೀತಿ ಜಾಗರೂಕರಾಗಿರಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಆಗ ಮಾತ್ರ.. ನಮ್ಮ ದೇಶವು ಕರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಿ ಜಯಗಳಿಸಲು ಸಾದ್ಯ......

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ಭಯಪಡುವ ಬದಲು ಜಾಗೃತರಾಗಬೇಕಿದೆ : ಹಂಝ ಬಸ್ತಿಕೋಡಿ Rating: 5 Reviewed By: karavali Times
Scroll to Top