ನವದೆಹಲಿ (ಕರಾವಳಿ ಟೈಮ್ಸ್) : ಎಪ್ರಿಲ್ 5 ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ ಕ್ಯಾಂಡಲ್ ಉರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿರುವ ಕರೆಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೋನಾ (ಕೋವಿಡ್ -19) ವಿರುದ್ದದ ಹೋರಾಟಕ್ಕೂ, ಮನೆಗಳ ದೀಪಗಳನ್ನು 9 ನಿಮಿಷ ಆರಿಸುವುದಕ್ಕೂ ಏನು ಸಂಬಂಧವಿದೆ ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಮನೆಯ ಲೈಟುಗಳನ್ನು ಆರಿಸುವುದಿಲ್ಲ. ಮೇಣದ ಬತ್ತಿಯನ್ನು ಬೆಳಗಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಈ ರೀತಿ ಮಾಡಿದರೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ, ಅದನ್ನು ಎದುರಿಸಲು ನಾನು ಸಿದ್ದವಾಗಿದ್ದೇನೆ ಎಂದು ಹೇಳಿದ್ದಾರೆ.
ಮನೆಯ ದೀಪಗಳನ್ನು ಆರಿಸಿ, ಮೇಣದ ಬತ್ತಿ ಬೆಳಗಿಸುವುದಕ್ಕೂ, ಕೊರೋನಾ ವಿರುದ್ದ ಹೋರಾಟ ನಡೆಸುವುದಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಲೈಟುಗಳನ್ನು ಆರಿಸುವುದಿಲ್ಲ. ಮೇಣದ ಬತ್ತಿಗಳನ್ನು ಬೆಳಗಿಸುವುದಿಲ್ಲ. ಆದರೆ, ನಾನು ಕೊರೋನಾ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಅಧಿರ್ ರಂಜನ್ ಚೌಧುರಿ ಹೇಳಿದ್ದಾರೆ.
ಇದೊಂದು ರಾಜಕೀಯ ಗಿಮಿಕ್ ಅಷ್ಟೆ. ಪ್ರಧಾನಿ ಮೋದಿ ಸಾಂಕ್ರಾಮಿಕ ರೋಗವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
0 comments:
Post a Comment