ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಹಿನ್ನಲೆ : ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್ ಸೂಚನೆ - Karavali Times ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಹಿನ್ನಲೆ : ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್ ಸೂಚನೆ - Karavali Times

728x90

13 April 2020

ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಹಿನ್ನಲೆ : ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್ ಸೂಚನೆ



ಬೆಂಗಳೂರು (ಕರಾವಳಿ ಟೈಮ್ಸ್) :  ಕೊರೊನ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿ ಗೊಳಿಸಲಾಗಿದ್ದ ಲಾಕ್ ಡೌನ್ ನಾಳೆಗೆ ಮುಕ್ತಾಯವಾಗಲಿದೆಯದರೂ ಮತ್ತೆ ಎರಡು ವಾರಗಳ ಮಟ್ಟಿಗೆ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ .
ಈ ನಿಟ್ಟಿನಲ್ಲಿ 2 ನೇ ಹಂತದ ಲಾಕ್ ಡೌನ್ ಬಗ್ಗೆ ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದ್ದು ಈ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಹಲವು ಸೂಚನೆ ನೀಡಿದ್ದಾರೆ.

ಪೋಲೀಸರಿಗೆ ಭಾಸ್ಕರ್ ರಾವ್ ನೀಡಿರುವ ಪ್ರಮುಖ ಸೂಚನೆಗಳು ಹೀಗಿದೆ

  • ಎಲ್ಲಾ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿ, ಎಲ್ಲರ ಕಡೆಯಿಂದ ಪ್ರಶಂಸೆ ಪಡೆದಿದ್ದೇವೆ.

  • ಇನ್ನು ಉಳಿದ ದಿನಗಳಲ್ಲಿ ಕೂಡ ನಾವು ಹೀಗೆ ಕೆಲಸ‌ ಮಾಡಬೇಕು, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು.
  • ಮಾಧ್ಯಮದವರಿಗೆ, ಹಣ್ಣು ತರಕಾರಿ, ದಿನಸಿ ತರುವವರಿಗೆ ಸಮಸ್ಯೆ ಮಾಡಬಾರದು.
  • ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು, ಖಾಲಿ ವಾಹನ ಇರಲಿ, ತುಂಬಿದ ವಾಹನ ಇರಲಿ. ಅವರಿಗೆ ಸಮಸ್ಯೆ ಮಾಡಬಾರದು.
  • ಮಾರ್ಕೆಟ್​ಗಳಿಗೆ ಬರುವ ಹಮಾಲಿಗಳಿಗೆ ತೊಂದರೆ ಕೊಡಬಾರದು.
  • ಕೆಲವರು ಪಾಸ್ ಇಲ್ಲದೆ ತುರ್ತಾಗಿ ಓಡಾಡಬೇಕಾಗಿರುತ್ತೆ, ಅಂತಾ ಸಮಯದಲ್ಲಿ ಸಾಮಾಜ್ಯಜ್ಞಾನ ಬಳಸಿ ನಿರ್ಧಾರ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಸಹನೆಯಿಂದ ಮಾತನಾಡಿಸಿ ಸಹಾಯ ಮಾಡಿ.
  • ಎಟಿಎಂ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಪ್ರವೈಟ್ ಸೆಕ್ಯೂರಿಟಿ ಎಸೆನ್ಸಿಯಲ್ ಸರ್ವಿಸ್ ಅವರಿಗೆ ತೊಂದರೆ ಕೊಡಬಾರದು.
  • ನಕಲಿ‌ ಪಾಸ್ ಮಾಡಿಕೊಂಡು ಓಡಾಡುವರ ವಿರುದ್ದ ಸೂಕ್ತ ಕ್ರಮ‌ ಜರುಗಿಸಿ. ಹಾಗೂ ಲಾಕ್ ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲು ದಾಖಲಾತಿಗಳನ್ನು ಮಾಡಿಕೊಳ್ಳಿ.
  • ಸಾರ್ವಜನಿಕರಿಗೆ ನಮ್ಮ‌ ಮೇಲೆ ನೀರಿಕ್ಷೆ ಇದೆ. ನೀವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಿ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಹಿನ್ನಲೆ : ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್ ಸೂಚನೆ Rating: 5 Reviewed By: karavali Times
Scroll to Top