ಲಾಕ್‍ಡೌನ್ ಪರಿಸ್ಥಿತಿ ಖುದ್ದು ಅವಲೋಕಿಸಲು ರಸ್ತೆಗಿಳಿದ ಸಿಎಂ ಯಡಿಯೂರಪ್ಪ - Karavali Times ಲಾಕ್‍ಡೌನ್ ಪರಿಸ್ಥಿತಿ ಖುದ್ದು ಅವಲೋಕಿಸಲು ರಸ್ತೆಗಿಳಿದ ಸಿಎಂ ಯಡಿಯೂರಪ್ಪ - Karavali Times

728x90

12 April 2020

ಲಾಕ್‍ಡೌನ್ ಪರಿಸ್ಥಿತಿ ಖುದ್ದು ಅವಲೋಕಿಸಲು ರಸ್ತೆಗಿಳಿದ ಸಿಎಂ ಯಡಿಯೂರಪ್ಪ



ಬೆಂಗಳೂರು (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಸಂಜೆ ಬೆಂಗಳೂರಿನ  ನಗರದಲ್ಲಿ  ಸಂಚರಿಸಿ ಕೊರೊನಾ ಲಾಕ್‍ಡೌನ್ ಪರಿಸ್ಥಿತಿಯನ್ನು ಖುದ್ದು ಅವಲೋಕನ ನಡೆಸಿದ್ದಾರೆ.

ನಗರದ ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್  ಜಂಕ್ಷನ್, ಯಶವಂತಪುರ ಭಾಗಗಳಿಗೆ ಭೇಟಿಕೊಟ್ಟು ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಯಶವಂತಪುರ ಫ್ಲೈಓವರ್ ಬಳಿ ಪೆÇಲೀಸರ ಬಳಿ ಮಾತುಕತೆ ನಡೆಸಿ ಪರಿಸ್ಥಿತಿಯ ಜನರ ಸಂಚಾರದ ಬಗ್ಗೆ ಮಾಹಿತಿ ಪಡೆದರು. ನಗರದ ಹಲವೆಡೆ ಸಂಚರಿಸಿ ಲಾಕ್‍ಡೌನ್ ಅನುಷ್ಠಾನವನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭ ಪೆÇಲೀಸರು, ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಕಿರಾಣಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರ ಜತೆ ಮಾತುಕತೆ ನಡೆಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಪರಿಸ್ಥಿತಿ ಖುದ್ದು ಅವಲೋಕಿಸಲು ರಸ್ತೆಗಿಳಿದ ಸಿಎಂ ಯಡಿಯೂರಪ್ಪ Rating: 5 Reviewed By: karavali Times