ಬಂಟ್ವಾಳ (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ. ರಮನಾಥ ರೈ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಕೆ. ಸಂಜೀವ ಪೂಜಾರಿ ಅವರ ನೇತೃತ್ವದಲ್ಲಿ, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜಾ ಅವರ ಸಹಕಾರದೊಂದಿಗೆ ಸಜಿಪಮೂಡ ಗ್ರಾ.ಪಂ., ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘ, ಎನ್.ವಿ. ಡಿಜಿಟಲ್ಸ್ ಮೆಲ್ಕಾರ್ ಇವರ ಸಹಯೋಗದೊಂದಿಗೆ ಸಜಿಪಮೂಡ ಗ್ರಾಮದ ಎಲ್ಲಾ ಮನೆಗಳಿಗೆ ಅಕ್ಕಿ ವಿತರಣೆ ಸಜಿಪಮೂಡ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಹಾಗೂ ಬೊಳ್ಳಾಯಿಯಲ್ಲಿ ಮಂಗಳವಾರ ನಡೆಯಿತು.
ಮಾಜಿ ಸಚಿವ ಬಿ. ರಮನಾಥ ರೈಯವರು ಮನೆಮನೆಗಳಿಗೆ ತೆರಳಿ ತಲಾ 10 ಕೆ.ಜಿ.ಯಂತೆ ಅಕ್ಕಿಯನ್ನು ವಿತರಿಸಿದರು. ಸಜಿಪಮೂಡ ಗ್ರಾಮದಲ್ಲಿ ಒಟ್ಟು 2500ರಷ್ಟು ಮನೆಗಳಿದ್ದು, ಬಡವ ಶ್ರೀಮಂತರೆನ್ನದೆ ಎಲ್ಲಾ ಮನೆಗಳಿಗೂ ಒಟ್ಟು 250 ಕ್ವಿಂಟಲ್ ಅಕ್ಕಿಯನ್ನು ವಿತರಿಸಲಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲಾ ಮನೆಗಳಿಗೂ ಅಕ್ಕಿ ತಲಿಪಲಿದೆ ಎಂದು ತಾ.ಪಂ. ಸದಸ್ಯ ಸಂಜೀವ ಪೂಜಾರಿ ತಿಳಿಸಿದ್ದಾರೆ. ಮಂಗಳವಾರ ಬೊಳ್ಳಾಯಿ, ಜಾಡಕೋಡಿ, ನಗ್ರಿ, ಪಣೋಲಿಬೈಲು, ಕಂಚಿಲ, ಗುರುಮಂದಿರ ಪರಿಸರದಲ್ಲಿ ಅಕ್ಕಿ ವಿತರಿಸಲಾಗಿದೆ.
ಈ ಸಂದರ್ಭ ತಾ.ಪಂ. ಸದಸ್ಯ ಸಂಜೀವ ಪೂಜಾರಿ, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಮುಖರಾದ ರಮೇಶ್ ಪಣೋಳಿಬೈಲು, ಜಯಶಂಕರ ಕಾನ್ಸಾಲೆ, ಸುದೀಪ್ ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್ ಪೆರ್ವ, ಯೋಗೀಶ್, ಕರಿಂ ನಗ್ರಿ, ಹಮೀದ್, ಇಕ್ಬಾಲ್ ನಂದಾವರ, ಹಜೀದ್, ಅಬ್ದುಲ್ ಕುಂಞÂ, ಅಶೋಕ್ ಕೋಮಾಲಿ, ರೋಹಿತ್ ಪೂಜಾರಿ ಪಟ್ಟುಗುಡ್ಡೆ, ವಿನೋದ್ ಪೂಜಾರಿ ಕೊಮಾಲಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment