ಬೀದರ್ (ಕರಾವಳಿ ಟೈಮ್ಸ್) : ದೆಹಲಿ ಜಮಾತ್‍ನಿಂದ ಬಂದಿದ್ದ 17 ಜನರ ಕೊರೊನಾ ವೈದ್ಯಕೀಯ ವರದಿ ನೆಗಟಿವ್ ಬಂದಿದೆ ಎಂದು ಬೀದರ್ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ್ ತಿಳಿಸಿದ್ದಾರೆ.
ಕೊರೊನಾ ಮಹಾಮಾರಿಗೆ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿದೆ. ಜಮಾತ್ ಧಾರ್ಮಿಕ ಕಾರ್ಯಕ್ರಮ ಕಂಟವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ, ಜಮಾತ್‍ಗೆ ಹೋಗಿದ್ದ ಬೀದರ್ ಮೂಲದ 28 ಜನರಲ್ಲಿ 10 ಜನರಿಗೆ ಈಗಾಗಾಲೇ ಕೊರೊನಾ ಸೋಂಕು ಧೃಡ ಪಟ್ಟಿದೆ. ಅನುಮಾವಿದ್ದ ಕಾರಣ ಇನ್ನೊಬ್ಬರ ವರದಿ ಬಾಕಿಯಿದೆ. ಉಳಿದ 17 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಮಾಹಿತಿ ನೀಡಿದ್ದಾರೆ.
ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ 82 ಜನರನ್ನು ಐಸೋಲೇಷನ್ ವಾರ್ಡ್‍ನಲ್ಲಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲು ಮೂರು ಪ್ರದೇಶದಿಂದ ಒಟ್ಟು 120 ಜನರ ಟೀಂ ಮಾಡಲಾಗಿದೆ. ಈ ಟೀಂ ಪ್ರತಿ ಮನೆಗೆ ಹೋಗಿ ಮಾಹಿತಿಯನ್ನು ಕಲೆ ಹಾಕುತ್ತಿದೆ. ಜಿಲ್ಲೆಯ ಜನರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment