ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಗ್ರಾಮ ಪಂಚಾಯತಿಯೊಂದರಲ್ಲಿ ಗ್ರಾಮ ಪಂಚಾಯತ್ ಕಾರ್ಯಪಡೆಯ ಸಭೆ ನಡೆಸಿದ ಸಂದರ್ಭ ಯಾವುದೇ ಪಡಿತರ ಚೀಟಿ ಹೊಂದಿರದ ಬಡ ಕಟುಂಬಗಳ ಸಮಸ್ಯೆಯು ಶಾಸಕರ ಗಮನೆಕ್ಕೆ ಬಂದಿದೆ. ಈ ಬಗ್ಗೆ ಶಾಸಕರು ಬಂಟ್ವಾಳ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಯವರನ್ನು ಸಂಪರ್ಕಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿ ಹೊಂದಿರದ ಕುಟುಂಬಗಳ ಪಟ್ಟಿ ಮಾಡಿ ನೀಡುವಂತೆ ಸೂಚಿಸಿದ್ದರು. ಅದರಂತೆ 2 ಸಾವಿರಕ್ಕೂ ಮಿಕ್ಕಿ ಬಡ ಕುಟುಂಬಗಳ ಪಟ್ಟಿ ಶಾಸಕರಿಗೆ ಸಲ್ಲಿಕೆಯಾಗಿದ್ದು, ಶಾಸಕರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 2 ಸಾವಿರ ಮಿಕ್ಕಿ ಕುಟುಂಬಗಳಿಗೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಶಾಸಕರು ತಮ್ಮ ಕಛೇರಿಯಲ್ಲಿ ಇಂದು ಚಾಲನೆ ನೀಡಿದ್ದಾರೆ.
ಈ ಸಂದರ್ಭ ಬುಡಾ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರಮುಖರಾದ ಉಮೇಶ್ ಅರಳ, ಕಾರ್ತಿಕ್ ಬಲ್ಲಾಳ್, ಸುದರ್ಶನ್ ಬಜೆ, ಪ್ರಮೋದ್ ಅಜ್ಚಿಬೆಟ್ಟು, ಶ್ರೀಕಾಂತ್ ಶೆಟ್ಟಿ ಸಜಿಪ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ನಗ್ರಿ, ಜಯರಾಮ್ ನಾಯ್ಕ್ ಕೊಳ್ನಾಡು, ಪ್ರಕಾಶ್ ಅಂಚನ್, ಸೀತಾರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment