ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಾರೆಕಾಡು ಎಂಬಲ್ಲಿ ಸೋಮವಾರ ಲಾಕ್‍ಡೌನ್ ಉಲ್ಲಂಘಿಸಿದ್ದಲ್ಲದೆ ಪುರಸಭಾ ಪರಿಸರ ಅಭಿಯಂತರರ ವಾಹನ ಚಾಲಕ ವೀರಪ್ಪ ಕೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಲ್ಲಿನ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಇಲ್ಲಿನ ನಿವಾಸಿಗಳಾದ ಅಂಗಡಿ ಮಾಲಕ ಯೂಸುಫ್ ಎಂಬವರ ಪುತ್ರ ರಫೀಕ್ (48) ಹಾಗೂ ಹಾರಿಸ್ ಎಂಬವರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸೋಮವಾರ ಬಂಟ್ವಾಳ ಪುರಸಭಾ ಪರಿಸರ ಅಭಿಯಂತರರು ಕರ್ತವ್ಯ ನಿಮಿತ್ತ ಬಾರೆಕಾಡಿಗೆ ಕಾರಿನಲ್ಲಿ ತೆರಳಿದ್ದ ವೇಳೆ ಮಧ್ಯಾಹ್ನ 1 ಗಂಟೆಗೆ ರಫೀಕ್ ಎಂಬವರ ಅಂಗಡಿ ತೆರೆದಿದ್ದು, ಅಂಗಡಿಯ ಎದುರು ಸುಮಾರು 5 ರಿಂದ 10 ಜನರು ಗುಂಪಾಗಿ ಸೇರಿರುವುದು ಕಂಡುಬಂದ ಹಿನ್ನೆಯಲ್ಲಿ, ಪರಿಸರ ಅಧಿಕಾರಿ ಅವರು ಲಾಕ್‍ಡೌನ್ ಇದೆ, ಇಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿಲ್ಲ. ಅಂಗಡಿ ಮುಚ್ಚುವಂತೆ ಸೂಚನೆ ನೀಡಿದರೂ ಅಂಗಡಿ ಮುಚ್ಚದೆ ಕೊರೋನಾ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದಿದ್ದರೂ ಅಂಗಡಿಯನ್ನು ತೆರೆದು ಉದ್ದೇಶಪೂರ್ವಕವಾಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಸಂದರ್ಭ ಗುಂಪಿನಲ್ಲಿದ್ದ ಖಾದರ್ ಎಂಬಾತ ಅಧಿಕಾರಿಯ ಕಾರು ಚಾಲಕ ವೀರಪ್ಪ ಅವರ ಅಂಗಿಯ ಕಾಲರ್ ಹಿಡಿದು ಜೀವ ಬೆದರಿಕೆ ಒಡ್ಡಿರುವುದಾಗಿರುತ್ತದೆ. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ ಎಂದು ದೂರಲಾಗಿತ್ತು.
ಈ ಬಗ್ಗೆ ಆರೋಪಿತರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 143, 147, 269, 270, 353, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
0 comments:
Post a Comment