ಬೆಂಗಳೂರು (ಕರಾವಳಿ ಟೈಮ್ಸ್) : ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾಪೆರ್Çೀರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಗಳು ಯೂ£ಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಮೂರು ಬ್ಯಾಂಕಿನ ಎಟಿಎಂ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು. ಈ ಮೂರು ಬ್ಯಾಂಕ್ ಗಳ ಒಟ್ಟು 13,500 ಕ್ಕೂ ಹೆಚ್ಚು ಎಟಿಎಂಗಳಿವೆ ಹಾಗೂ 9500 ಕ್ಕೂ ಹೆಚ್ಚು ಬ್ಯಾಂಚ್ ಗಳನ್ನು ಹೊಂದಿವೆ.
ಗ್ರಾಹಕರ ಆಯಾ ಬ್ಯಾಂಕಿನ (ಕಾಪೆರ್Çೀರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಯೂ£ಯನ್ ಬ್ಯಾಂಕ್ ಆಫ್ ಇಂಡಿಯಾ) ಅಕೌಂಟ್ ನಂಬರ್, ಐಎಫ್‍ಎಸ್ಸಿ ಕೋಡ್ ಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಗ್ರಾಹಕರು ತಮ್ಮ ಹಳೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನೇ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು. ಜತೆಗೆ ಇಂಟರ್ ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಪೆÇೀರ್ಟಲ್ ನಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ.
0 comments:
Post a Comment