ನವದೆಹಲಿ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೋನಾ ಹಾವಳಿ ವ್ಯಾಪಕವಾಗಿ ಬಿಸಿ ಮುಟ್ಟಿಸಿದ ನಡುವೆ ಕರ್ನಾಟಕ ಕರಾವಳಿ ಭಾಗದ ನಾಲ್ಕು ಸಾರ್ವಜನಿಕ ಬ್ಯಾಂಕ್‍ಗಳಾದ ವಿಜಯಾ, ಕೆನರಾ, ಸಿಂಡಿಕೇಟ್ ಹಾಗೂ ಕಾಪೆರ್Çರೇಶನ್ ಬ್ಯಾಂಕುಗಳು ಸದ್ದಿಲ್ಲದೆ ತೆರೆಗೆ ಸರಿದಿದ್ದು, ಎಪ್ರಿಲ್ 1ರಿಂದಲೇ ಇತರ ಬ್ಯಾಂಕುಗಳ ಜತೆ ವಿಲೀನಕ್ಕೆ ಸೇರಿಕೊಂಡಿದೆ.
ಇನ್ನು ಈ ಬ್ಯಾಂಕುಗಳ ಹೆಸರು ನೆನಪು ಮಾತ್ರ. 2019ರ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು 10 ಸಾರ್ವಜನಿಕ ವಲಯದ, ಹಾಗೂ ಲಾಭದಲ್ಲಿರದ ಬ್ಯಾಂಕುಗಳನ್ನು ನಾಲ್ಕು ದೊಡ್ಡ ಮತ್ತು ಬಲವಾದ ಬ್ಯಾಂಕುಗಳಾಗಿ ವಿಲೀನಗೊಳಿಸುವುದಾಗಿ ಘೋಷಣೆ ಮಾಡಿತ್ತು. ಅದು ಎಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಜೊತೆ ವಿಲೀನಗೊಳಿಸಲಾಗುವುದು. ವಿಲೀನದ ನಂತರ, ಇವುಗಳು ಒಟ್ಟಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಂತರ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಲಿದೆ. ಸಿಂಡಿಕೇಟ್ ಬ್ಯಾಂಕ್‍ನ್ನು ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗುವುದು.
ಅದೇ ರೀತಿ ಇಂಡಿಯನ್ ಬ್ಯಾಂಕ್‍ನ್ನು ಅಲಹಾಬಾದ್ ಬ್ಯಾಂಕಿನೊಂದಿಗೆ ವಿಲೀನಗೊಳಿಸಲಾಗುವುದು. ಆಂಧ್ರ ಬ್ಯಾಂಕ್ ಮತ್ತು ಕಾಪೆರ್Çರೇಷನ್ ಬ್ಯಾಂಕನ್ನು ಬ್ಯಾಂಕ್ ಆಫ್ ಇಂಡಿಯಾ ನೊಂದಿಗೆ ವಿಲೀನಗೊಳಿಸಲಾಗಿದೆ. ವಿಲೀನಗೊಳ್ಳುವ ಬ್ಯಾಂಕುಗಳ ಠೇವಣಿದಾರರು ಸೇರಿದಂತೆ ಗ್ರಾಹಕರನ್ನು ಬ್ಯಾಂಕುಗಳ ಗ್ರಾಹಕರಂತೆ ಪರಿಗಣಿಸಲಾಗುತ್ತದೆ, ಈ ಬ್ಯಾಂಕುಗಳ ವಿಲೀನ ಎಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಬ್ಯಾಂಕುಗಳ ಸಂಖ್ಯೆ 18 ರಿಂದ 12ಕ್ಕೆ ಇಳಿಯಲಿದೆ.
0 comments:
Post a Comment