ಬೆಂಗಳೂರು (ಕರಾವಳಿ ಟೈಮ್ಸ್) : ನಗರದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ಸಂಚರಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಬೆಂಗಳೂರು ನಗರ ಪೆÇಲೀಸರು ಮಂಗಳವಾರ ರಾತ್ರಿಯಿಂದ 5678 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ವಶಪಡಿಸಿಕೊಂಡ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿ, ಮಾಲೀಕರನ್ನು ಕರೆಸಿ, ಎಚ್ಚರಿಕೆ ಕೊಟ್ಟು ಬಿಟ್ಟು ಕಳುಹಿಸಲಾಗುತ್ತಿದ್ದು, ಬುಧವಾರದಿಂದ ವಶಪಡಿಸಿಕೊಂಡ ವಾಹನಗಳನ್ನು ಲಾಕ್‍ಡೌನ್ ಮುಗಿಯುವವರೆಗೆ ವಾಪಸ್ ನೀಡುವುದಿಲ್ಲ. ಇದನ್ನು ಎಪ್ರಿಲ್ ಫೂಲ್ ಎಂದು ಯಾರೂ ತಿಳಿದುಕೊಳ್ಳುವಂತಿಲ್ಲ ಎಂದು ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ.
ನಗರದ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಆಗ್ನೇಯ, ಈಶಾನ್ಯ ವೈಟ್‍ಫೀಲ್ಡ್ ಸೇರಿ ಎಲ್ಲಾ ವಿಭಾಗಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಅನಗತ್ಯವಾಗಿ ರಸ್ತೆಗೆ ವಾಹನ ತೆಗೆದುಕೊಂಡು ಬರುವವರ ವಿಚಾರಣೆ ನಡೆಸಲಾಗುತ್ತಿದ್ದು ರಾತ್ರಿಯಿಂದ ಇಲ್ಲಿಯವರೆಗೆ 5229 ದ್ವಿಚಕ್ರ ವಾಹನಗಳು, 185 ಆಟೋಗಳು, 264 ಕಾರುಗಳು ಸೇರಿ 5678 ವಾಹನಗಳನ್ನು ಜಫ್ತಿ ಮಾಡಲಾಗಿದೆ ಎಂದವರು ತಿಳಿಸಿದರು.
ಸೂಕ್ತ ಕಾರಣ ನೀಡದೆ ಸಂಚರಿಸುವ ವಾಹನಗಳನ್ನು ಮುಲಾಜಿಲ್ಲದೆ ವಶಪಡಿಸಿಕೊಳ್ಳಲಾಗುವುದು ಎಂದ ಆಯುಕ್ತರು ಜಫ್ತಿ ಮಾಡಿದ ವಾಹನಗಳನ್ನು ಸಂಜೆ ವೇಳೆಗೆ ಬಿಡಲಿದ್ದಾರೆ ಎಂಬ ಕಾರಣಕ್ಕೆ ಹಲವರು ಮತ್ತೆ ವಾಹನಗಳನ್ನು ರಸ್ತೆಗೆ ತರುವುದು ಸಾಮಾನ್ಯವಾಗಿದ್ದು, ಇದನ್ನು ನಿಲ್ಲಿಸಲು ಲಾಕ್‍ಡೌನ್ ಮುಗಿಯುವವರೆಗೆ ಜಫ್ತಿ ಮಾಡಿದ ವಾಹನಗಳನ್ನು ವಾಪಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ರಸ್ತೆ ಖಾಲಿಯಿರುವ ಕಾರಣಕ್ಕೆ ಮೋಜು ಮಾಡಲು ಬೈಕ್‍ಗಳಲ್ಲಿ ಯುವಕರು ಸಂಚರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪೆÇಲೀಸರು ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಪೆÇಲೀಸ್ ಠಾಣೆಗಳಲ್ಲಿ ಸ್ಥಳವಕಾಶವಿಲ್ಲದಿದ್ದರೆ ಖಾಸಗಿ ಸ್ಥಳಗಳಲ್ಲಿ ನಿಲ್ಲಿಸಿ, ಭದ್ರತೆ ಕೈಗೊಳ್ಳಲುವಾಗುವುದು ಎಂದವರು ತಿಳಿಸಿದರು. ಈಗಾಗಲೇ ತುರ್ತು ಅವಶ್ಯಕತೆ ಇದ್ದವರಿಗೆ ಪಾಸ್‍ಗಳನ್ನು ವಿತರಿಸಲಾಗಿದೆ. ಆದರೆ, ಕೆಲವರು ನಕಲಿ ಐಡಿ ಕಾರ್ಡ್ ಬಳಸಿಕೊಂಡು, ಸುಳ್ಳು ನೆಪ ಹೇಳಿ ರಸ್ತೆಯಲ್ಲಿ ಓಡಾಡುತ್ತಿದ್ದವರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಲೌಕ್‍ಡೌನ್ ಗೆ ಜನ ಸ್ಪಂದಿಸುತ್ತಿದ್ದು, ಶೇ.90ರಷ್ಟು ಮಂದಿ ಮನೆಯಲ್ಲಿದ್ದಾರೆ. ಆದರೆ, ಶೇ.10ರಷ್ಟು ಜನ ಮಾತ್ರ ಹೊರಗೆ ತಿರುಗಾಡುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದರು. ನಗರದಲ್ಲಿ ಪೆÇಲೀಸರು ಲಾಠಿ ಬಳಸದೇ, ಅತ್ಯಂತ ಸೌಜನ್ಯದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಸಾರ್ವಜನಿಕರು ಇದಕ್ಕೂ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ದಿನಸಿ, ತರಕಾರಿ ತೆಗೆದುಕೊಂಡು ಬರಲು ಸಾರ್ವಜನಿಕರಿಗೆ ವಾಹನ ಬಳಸದಂತೆ ಈ ವೇಳೆ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
0 comments:
Post a Comment