ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬಡಗಕಜೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಜೆಕಾರ್ ಹಾಗೂ ತೆಂಕ ಕಜೆಕಾರ್ ಗ್ರಾಮಕ್ಕೆ ಒಳಪಟ್ಟ 850 ಕುಟುಂಬಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಗುರುವಾರ ಅಕ್ಕಿ ವಿತರಣೆ ನಡೆಸಲಾಯಿತು.
ಈ ಸಂದರ್ಭ ಜಿ ಪಂ ಸದಸ್ಯ ಬಿ. ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ವಾಸಣ್ಣ, ಜಯ ಬಂಗೇರ, ವಿರೇಂದ್ರ ಜೈನ್, ಡೀಕಯ್ಯ ಬಂಗೇರ, ಮೋನಪ್ಪ ಕಡೆಂತ್ಯಾರ್, ಅಬ್ದುಲ್ಲ ಪಾಂಡವರಕಲ್ಲು, ಸತೀಶ್ಚಂದ್ರ ಕೆಯೆ, ಸುಧಾಕರ್ ಶೆಣೈ, ಮಹಾಬಲ ಅಂಬುಡೇಲು, ರವಿ ಸಾಲ್ಯಾನ್ ಮೋರಂಪೇಳು, ಲಕ್ಷ್ಮಣ ಪೂಜಾರಿ ಅಂಬುಡೇಲು, ರಾಮಚಂದ್ರ ಮಾಡಪಲ್ಕೆ, ಓಬಯ್ಯ ಮಾಡಪಲ್ಕೆ, ಆನಂದ ಕರ್ಲ, ದಿವಾಕರ್ ಪೂಜಾರಿ, ಕೇಶವ ಪೂಜಾರಿ, ಗಂಗಾಧರ ಪೂಜಾರಿ, ಚೆನ್ನಪ್ಪ ಮಾಡಪಲ್ಕೆ, ರೂಪೇಶ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment