ಬಂಟ್ವಾಳ (ಕರಾವಳಿ ಟೈಮ್ಸ್) : ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮ ವ್ಯಾಪ್ತಿಯ ಸುಮಾರು 155 ಬಡ ಕುಟುಂಬಗಳಿಗೆ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ಊರ ಹಾಗೂ ಪರ ಊರ ದಾನಿಗಳ ಸಹಕಾರದೊಂದಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳಾದ ಮೆಣಸು ಸಕ್ಕರೆ ಚಾಹುಡಿ ನೀರುಳ್ಳಿ ಬೇಳೆ ತೆಂಗಿನಕಾಯಿ ಉಪ್ಪು ಮೊದಲಾದ ಸಾಮಾಗ್ರಿಗಳನ್ನು ಸುಮಾರು 75 ಮಂದಿ ಕಾರ್ಯಕರ್ತರು ಆಯಾಯ ಪ್ರದೇಶದಲ್ಲಿ ಮನೆ ಮನೆಗಳಿಗೆ ವಿತರಿಸಿದರು.
ಈ ಸಂದರ್ಭ ಜಿ. ಪ್ರಕಾಶ್ ಆಳ್ವ, ರಮೇಶ್ ಬಟ್ಟಾಜೆ, ತಿರುಲೇಶ್, ಸುಬ್ರಮಣ್ಯ ಮಯ್ಯ, ಚಂದ್ರಶೇಖರ್ ರಾವ್, ಅಶ್ವತ್ ಹೇರಳ, ರತ್ನಾಕರ ಕೋಟ್ಯಾನ್, ವಿಠಲ ಪೂಜಾರಿ, ಮೋಹನದಾಸ, ಶಶಿಕಿರಣ್ ಪೂಜಾರಿ, ಜಗದೀಶ್ ಕುಲಾಲ್, ಗುಣಪಾಲ ಶೆಟ್ಟಿ, ಯೋಗೀಶ್ ಸಾಣೂರು, ಶಿವಪ್ರಸಾದ್ ಧನುಪೂಜೆ, ಈಶ್ವರ ಪೂಜಾರಿ, ಚಿದಾನಂದ ಕುಲಾಲ್, ಜಯಂತ ಪೂಜಾರಿ, ಯೋಗಿಶ್ ನೆಲ್ಲಿಮಾರು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment