ಮಂಗಳೂರು (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಿಡುಗಡೆಗೊಳಿಸಿದ್ದ ವೀಡಿಯೋ ಸಂದೇಶದಲ್ಲಿ ಕ್ಯಾಂಡಲ್ ಹಚ್ಚುವಂತೆ ಸಲಹೆ ನೀಡಿರುವ ಬಗ್ಗೆ ಕರಾವಳಿ ಭಾಗದಲ್ಲಿ ನೈಜ ಬಿಜೆಪಿ ಕಾರ್ಯಕರ್ತರು ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಆಡಿಯೋ ಸಂದೇಶಗಳು ವ್ಯಾಪಕ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಧಾನಿ ಜನರನ್ನು ವಂಚಿಸುತ್ತಿದ್ದಾರೆ. ಇಂತಹ ಮೌಢ್ಯ ನಿರ್ಧಾರಗಳು ಅತಿಯಾಯಿತು ಎಂದು ಕಟುವಾಗಿ ಟೀಕಿಸಿದ್ದಾರೆ.
ಪ್ರಧಾನಿಗಳು ಶುಕ್ರವಾರ ಸಂದೇಶ ನೀಡುತ್ತಾರೆ ಎನ್ನುವಾಗ ದೀರ್ಘ ಲಾಕ್‍ಡೌನ್‍ನಿಂದ ಬಸವಳಿದಿದ್ದ ದೇಶದ ಜನ ಅದೇನೋ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೋದಿ ಕ್ಯಾಂಡಲ್ ಹಚ್ಚಿ ಎಂದು ಪುಕ್ಕಟೆ ಸಲಹೆ ನೀಡಿದಾಗ ಅದೇಕೋ ನಗಬೇಕೋ, ಅಳಬೇಕೋ ಎಂದು ತೋಚುತ್ತಿಲ್ಲ ಎಂದು ಆಡಿಯೋದಲ್ಲಿ ಹೇಳಿರುವ ಮಂದಿ ಪ್ರಧಾನಿಗಳು ಇದಕ್ಕೆ ಬದಲಾಗಿ ಕನಿಷ್ಠ ಒಂದೈದು ನಿಮಿಷ ನಿಮ್ಮ ನಿಮ್ಮ ದೇವರುಗಳಿಗೆ ಪೂಜೆ ಮಾಡಿ ಎಂದಿದ್ದರೆ ಅದನ್ನಾದರೂ ಒಪ್ಪಿಕೊಳ್ಳಬಹುದಿತ್ತು ಎಂದು ವ್ಯಂಗ್ಯ ಮಾತುಗಳನ್ನಾಡಿದ್ದಾರೆ.
0 comments:
Post a Comment