ಆತೂರು (ಕರಾವಳಿ ಟೈಮ್ಸ್) : ಆತೂರು ಬದ್ರಿಯಾ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರ ಜಂಟಿ ಆಶ್ರಯದಲ್ಲಿ ರಾಮಕುಂಜ ಗ್ರಾಮ ಪಂಚಾಯತ್, ಆತೂರು ನ್ಯಾಯ ಬೆಲೆ ಅಂಗಡಿ ಹಾಗೂ ಆತೂರು ಪರಿಸದಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು.
ರಾಮಕುಂಜ ಗ್ರಾಮ ಪಂಚಾಯತ್‍ನಲ್ಲಿ ಮಾಸ್ಕ್ ವಿತರಣೆ ಸಂಧರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್, ಪಿಡಿಓ ಜೆರಾಲ್ಡ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಲಿತಾ, ಪಂಚಾಯತ್ ಸದಸ್ಯರುಗಳಾದ ಯತೀಶ್ ಬಾನಡ್ಕ, ರವಿ ಕೆದಿಲಾಯ, ಎಚ್. ಅಬ್ದುಲ್ ರಹಿಮಾನ್, ಕೇಶವ ಗಾಂಧಿಪೇಟೆ, ಅರೋಗ್ಯ ಸಿಬ್ಬಂದಿಗಳಾದ ಆಶಾ ಕಾರ್ಯಕರ್ತರಿಗೆ, ಶಾಲೆ ಮುಖ್ಯ ಗುರುಗಳು, ಪೆÇಲೀಸ್ ಸಿಬ್ಬಂದಿಗಳಿಗೆ, ಆತೂರು ನ್ಯಾಯಬೆಲೆ ಅಂಗಡಿ ಪರಿಸದಲ್ಲಿ ಹಾಗೂ ಆತೂರು ಪೇಟೆಯಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು.
ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ ಕೆ ಅಬ್ದುಲ್ ರಝಾಕ್, ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ನೀರಾಜೆ, ಕಾರ್ಯದರ್ಶಿ ಝಕರಿಯಾ ಮುಸ್ಲಿಯಾರ್, ಸಂಘಟನಾ ಕಾರ್ಯದರ್ಶಿ ರಾಝಿಕ್ ಆತೂರು, ಆತೂರು ಶಾಖಾಧ್ಯಕ್ಷ ಬಿ.ಆರ್. ಅಬ್ದುಲ್ ಖಾದರ್, ಆತೂರು ಬೈಲ್ ಶಾಖಾಧ್ಯಕ್ಷ ಇಸ್ಮಾಯಿಲ್ ಆತೂರು ಬೈಲ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment