ಮಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಗಿರುವ ಹಿನ್ನಲೆಯಲ್ಲಿ ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಹಕಾರದೊಂದಿಗೆ ಚಕ್ರಪಾಣಿ ಸೇವಾ ಸಮಿತಿ ವತಿಯಿಂದ ಸಂಕಷ್ಟಕ್ಕೀಡಾಗಿರುವ ಆಯ್ದ 100 ಬಡ ಕುಟುಂಬಗಳಿಗೆ ಸುಮಾರು 81,000/- ರೂಪಾಯಿ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸೇವಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕೋಟ್ಯಾನ್, ಆಡಳಿತಾಧಿಕಾರಿ ಶ್ರೀಧರ್ ಶೆಟ್ಟಿ, ಲೆಕ್ಕ ಪರಿಶೋಧಕ ನರೇಂದ್ರ ಪೈ, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್, ಸದಸ್ಯರಾದ ವಿಕ್ರಂ ಪೈ, ದೇವಿಪ್ರಸಾದ್ ಡಿ. ನಾೈಕ್ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರೇಶ ಅತ್ತಾವರ, ಮೋಹನ್‍ದಾಸ್ ಕೊಟ್ಟಾರಿ, ವ್ಯವಸ್ಥಾಪಕರಾದ ಎಂ. ಸುಂದರ್ ಕೋಟ್ಯಾನ್, ಸೇವಾ ಸಮಿತಿ ಉಪಾಧ್ಯಕ್ಷ ರಾಜೇಶ್ ಕೆ. ಜೈನ್ ಕೌಂಪಾಂಡ್, ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಕೋಶಾಧಿಕಾರಿ ಪ್ರವೀಣ್ ಮೇಲಿನ ಮೊಗರು, ಜತೆ ಕಾರ್ಯದರ್ಶಿ ಪ್ರವೀಣ್ ಅತ್ತಾವರ, ಅಶೋಕ್ ಕುಮಾರ್, ಮಂಜುನಾಥ್ ಎಚ್., ಗುರುಪ್ರಸಾದ್ ವಿ. ಅತ್ತಾವರ, ನವೀನ್ ಚಂದ್ರ ಸುವರ್ಣ, ಜಯಂತ್, ಧೀರಾಜ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment