ಆಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ : ದೊಡ್ಡಣ್ಣನ ಮುಂದೆ ಮಂಡಿಯೂರಿದರೇ ವಿಶ್ವನಾಯಕ? - Karavali Times ಆಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ : ದೊಡ್ಡಣ್ಣನ ಮುಂದೆ ಮಂಡಿಯೂರಿದರೇ ವಿಶ್ವನಾಯಕ? - Karavali Times

728x90

7 April 2020

ಆಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ : ದೊಡ್ಡಣ್ಣನ ಮುಂದೆ ಮಂಡಿಯೂರಿದರೇ ವಿಶ್ವನಾಯಕ?

 

 

ಅಮೇರಿಕಾದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು
ಬ್ರಿಟನ್ ಪ್ರಧಾನಿಗೆ ಐಸಿಯುನಲ್ಲಿ ಚಿಕಿತ್ಸೆ


ನವದೆಹಲಿ (ಕರಾವಳಿ ಟೈಮ್ಸ್) : ಆಂಟಿ ಮಲೇರಿಯಾ ಔಷಧಿಗಾಗಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು. ಅಲ್ಲದೆ ಒಂದೊಮ್ಮೆ ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳೋದಾಗಿ ಟ್ರಂಪ್ ಬೆದರಿಸಿದ್ದರು.

    ಟ್ರಂಪ್ ಬೆದರಿಕೆಗೆ ದೇಶದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಎಂದು ಕೈ ನಾಯಕ ಶಶಿತರೂರ್ ಟ್ವೀಟ್ ಮಾಡಿದ್ದಾರೆ.

    ಅಮೇರಿಕಾದ ಬಲವಂತಕ್ಕೆ ಮಣಿದು ಭಾರತ ಔಷಧಿ ರಫ್ತಿಗೆ ಮನಸ್ಸು ಮಾಡಿತೇ? ಟ್ರಂಪ್ ಬೆದರಿಕೆಗೆ ಮಂಡಿಯೂರಿದರೇ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಎಂಬ ಧಾಟಿಯಲ್ಲಿ ಪ್ರತಿಪಕ್ಷ ನಾಯಕರು ಇದೀಗ ಪ್ರಶ್ನಿಸಲು ಆರಂಭಿಸಿದ್ದಾರೆ.
    ವಿಶ್ವಾದ್ಯಂತ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 13.60 ಲಕ್ಷಕ್ಕೆ ಏರಿದ್ದು, 75,910 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 3 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಂತೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

    ದೇಶ           ಸೋಂಕಿತರು         ಸಾವು

    ಅಮೆರಿಕ      3.67 ಲಕ್ಷ       10,934 (ಮಂಗಳವಾರ 72)
    ಸ್ಪೇನ್        1.40 ಲಕ್ಷ       13,798 (ಮಂಗಳವಾರ 457)
    ಇಟಲಿ        1.32 ಲಕ್ಷ       16,523
    ಜರ್ಮನಿ      1.03 ಲಕ್ಷ       1,810
    ಫ್ರಾನ್ಸ್        98 ಸಾವಿರ      8,911


    ಬೆಲ್ಜಿಯಂನಲ್ಲಿ 22 ಸಾವಿರಕ್ಕೇರಿದೆ, 2,035 ಜನ ಸತ್ತಿದ್ದಾರೆ. ಮಂಗಳವಾರ ಒಂದೇ ದಿನ 403 ಮಂದಿ ಜೀವಬಿಟ್ಟಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಆಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ : ದೊಡ್ಡಣ್ಣನ ಮುಂದೆ ಮಂಡಿಯೂರಿದರೇ ವಿಶ್ವನಾಯಕ? Rating: 5 Reviewed By: karavali Times
Scroll to Top