ಬಂಟ್ವಾಳ (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಕೊರೊನಾ ಹಾಟ್‍ಸ್ಪಾಟ್ ಎಂದು ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ದೃಢವಾಗಿದೆ. ಕೊನೊನಾ ಸೋಂಕಿತ ರೋಗಿ ಪಿ-409 ಸಂಪರ್ಕಕ್ಕೆ ಬಂದಿದ್ದ ಬಂಟ್ವಾಳದ 33 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ಮಂಗಳೂರಿನ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳದಲ್ಲಿ ಈಗಾಗಲೇ ಕೊರೋನಾ ವೈರಸ್ಸಿಗೆ ಇಬ್ಬರು ಬಲಿಯಾಗಿದ್ದಾರೆ. ಕೊರೊನಾಗೆ ಕಳೆದ ಭಾನುವಾರ ಮೊದಲ ಬಲಿಯಾದ ವೃದ್ದ ಮಹಿಳೆಯ ನೆರೆಮನೆಯ ಮಹಿಳೆಗೂ (ಪಿ-409) ಕೊರೊನಾ ತಗುಲಿದ್ದು, ಈಕೆಯ ಮಗಳಿಗೂ ಇದೀಗ ಕೋವಿಡ್ ಸೋಂಕು ಇರುವುದು ದೃಡವಾಗಿದೆ. ಈ ಹಿನ್ನಲೆಯಲ್ಲಿ ತಾಯಿ, ಮಗಳು ಇಬ್ಬರಿಗೂ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಮಹಿಳೆಯ ಗಂಡ ವಿದೇಶದಲ್ಲಿರುವುದರಿಂದ ಬಂಟ್ವಾಳ ಪೇಟೆಯಲ್ಲಿರುವ ತಾಯಿ ಮನೆಯಲ್ಲಿಯೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಾಯಿಗೆ ಕೊರೊನ ಪಾಸಿಟಿವ್ ದೃಡವಾದ ಕೂಡಲೇ ಮನೆಯ ಎಲ್ಲಾ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ಪಾಸಿಟಿವ್ ದೃಡವಾದ ಮಹಿಳೆ ಮಂಗಳೂರಿನಲ್ಲಿ ಕ್ವಾರಂಟೈನ್‍ನಲ್ಲಿದ್ದರು ಎಂದು ತಿಳಿದು ಬಂದಿದೆ.
0 comments:
Post a Comment